ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಡ್ರ್ಯಾಡ್ ಮೊಬೈಲ್ ಮಾರುಕಟ್ಟೆಗೆ ಚೀನಾದ ಹ್ಯುವೈ

By Mahesh
|
Google Oneindia Kannada News

Huawei to launch Two Android phones in India
ಬೆಂಗಳೂರು, ಡಿ.14: ಚೀನಾ ಮೂಲದ ಹ್ಯುವೈ ಟೆಕ್ನಾಲಜೀಸ್ ಸಂಸ್ಥೆ ಎರಡು ಹೊಸ ಆಂಡ್ರ್ಯಾಡ್ ಮೊಬೈಲ್ ಗಳನ್ನು ಭಾರತದಲ್ಲಿ ಹೊರತರಲಿದೆ. ಐಡಿಯೋಸ್ ಎಕ್ಸ್ 5 ಹಾಗೂ ಎಕ್ಸ್ 6 ಎಂಬ ಹೆಸರಿನ ಈ ಸ್ಮಾರ್ಟ್ ಫೋನ್ ಗಳು ಜನವರಿ ತಿಂಗಳ ಮಧ್ಯಭಾಗದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಇದೇ ಮಾದರಿಯ ಮೊಬೈಲ್ ಫೋನ್ ಗಳನ್ನು ಆಸ್ಟೇಲಿಯಾದಲ್ಲಿ ಪರಿಚಯಿಸಿ ಉತ್ತಮ ಪ್ರತಿಕ್ರಿಯೆ ಕಂಡು ಕೊಂಡಿರುವ ಹ್ಯುವೈ ಕಂಪೆನಿ ಭಾರತದಲ್ಲಿ ತನ್ನ ಅದೃಷ್ಟ ಪರೀಕ್ಷಿಸಲಿದೆ.

ಆಡ್ರ್ಯಾಂಡ್ ಆಪರೇಟಿಂಗ್ ಸಿಸ್ಟಮ್ ಆವೃತ್ತಿ 2.2 ಫ್ರಾಯೊ(Froyo) ಐಡಿಯೋಸ್ ಎಕ್ಸ್ 5 ಹಾಗೂ ಎಕ್ಸ್ 6 ಎರಡರಲ್ಲೂ ಅಳವಡಿಸಲಾಗಿದೆ. ಹ್ಯುವೈ ಐಡಿಯೋಸ್ ಎಕ್ಸ್ 5ನಲ್ಲಿ 3.8 ಇಂಚಿನ ಟಚ್ ಸ್ಕ್ರೀನ್ ಇದೆ ಹಾಗೂ LED ಫ್ಲಾಶ್ ಸೌಲಭ್ಯವುಳ್ಳ 5 ಮೆಗಾ ಪಿಕ್ಸಲ್ ಕೆಮೆರಾವಿದೆ. ಉಳಿದ ಸ್ಮಾರ್ಟ್ ಫೋನ್ ಗಳಂತೆ ವೈಫೈ, HSDPA, HSUPA, ಜಿಪಿಎಸ್, 3ಜಿ ಜಾಲಕ್ಕೆ ಒಳಪಟ್ಟಿದೆ. ಗೂಗಲ್ ನ ಸುಮಾರು 80 ಸಾವಿರಕ್ಕೂ ಅಧಿಕ ಅಪ್ಸ್ ಗಳು ಐಡಿಯೋಸ್ x5ನಲ್ಲಿ ಬಳಸಬಹುದಾಗಿದೆ.

ಇದರಂತೆ, ಐಡಿಯೋಸ್ x6 ಕೊಂಚ ಸುಧಾರಣೆ ಹೊಂದಿದ್ದು, 4.1 ಇಂಚಿನ ಟಚ್ ಸ್ಕ್ರೀನ್(480 × 800 pixel resolution) ಇದೆ.ಫೈಲ್ ಡೌನ್ ಲೋಡ್ ವೇಗ 14.4 Mbps ನಷ್ಟಿರುತ್ತದೆ. ಹೈಡಿಫಿನಿಷನ್ (HD)ವಿಡಿಯೋ ರೆಕಾರ್ಡಿಂಗ್ ಮಾಡಲು ಹಾಗೂ ನೋಡಲು ಇದು ಸೂಕ್ತವಾಗಿದೆ.

ಐಡಿಯೋಸ್ x6 ನಲ್ಲಿ HDMI ಕೂಡಾ ಇದ್ದು, ಇದರಿಂದ ಫೋನ್ ಅನ್ನು HD ಟಿವಿಗೆ ಕನೆಕ್ಟ್ ಮಾಡಲು ಸುಲಭವಾಗುವಂತೆ ಸೌಲಭ್ಯ ಒದಗಿಸಲಾಗಿದೆ. LED ಫ್ಲಾಶ್ ಸೌಲಭ್ಯವುಳ್ಳ 5 ಮೆಗಾ ಪಿಕ್ಸಲ್ ಕೆಮೆರಾವಿದೆ. ಎರಡೂ ಮೊಬೈಲ್ ಫೋನ್ ಗಳ ಬೆಲೆಯ ಬಗ್ಗೆ ಬೆಂಗಳೂರಿನ ಹ್ಯುವೈ ಘಟಕ ಯಾವುದೇ ಸೂಚನೆ ನೀಡದೆ ಸ್ಪರ್ಧಾತ್ಮಕ ಬೆಲೆ ನೀಡಲಾಗುತ್ತದೆ ಎಂದಷ್ಟೇ ಹೇಳಿದ್ದಾರೆ. ಹ್ಯುವೈ ಮೊಬೈಲ್ ಗಳ ಮೂಲಕ ಚೀನಾ ಮೂಲದ ಸ್ಮಾರ್ಟ್ ಫೋನ್ ಗಳು ಅಧಿಕೃತವಾಗಿ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದಂತಾಗುತ್ತದೆ.

English summary
China based Huawei Technologies set to launch Android based Smartphones "Ideos X5" and "X6 in Indian market by January 2011. Both mobile phones runs on Android 2.2 Froyo. Huawei X6 Smartphones comes with HDMI and 5MP camera. apart from 3G, Wi Fi and HSDPA, HSUPA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X