ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಕರೆ ಅವರಿಗೆ ಬೆದರಿಕೆ ಇತ್ತು : ದಿಗ್ವಿಜಯ್ ಸಿಂಗ್

By Mrutyunjaya Kalmat
|
Google Oneindia Kannada News

Congress logo
ನವದೆಹಲಿ, ಡಿ. 11 : ಮುಂಬೈ ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ ಕರ್ಕರೆ ಹಿಂದೂ ಸಂಘಟನೆಗಳಿಂದ ಬೆದರಿಕೆ ಕರೆ ಬರುತ್ತಿವೆ ಎಂದು ಮುಂಬೈ ಭಯೋತ್ಪಾದಕ ದಾಳಿಗೆ ಮೊದಲು ತನಗೆ ದೂರವಾಣಿ ಕರೆಯೊಂದನ್ನು ಮಾಡಿ ತಿಳಿಸಿದ್ದರೆನ್ನುವ ಮೂಲಕ ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತೊಂದು ವಿವಾದವನ್ನು ಎಬ್ಬಿಸಿದ್ದಾರೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

ದಿಗ್ವಿಜಯ ಸಿಂಗ್ ಅವರ ಹೇಳಿಕೆಗೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ. ದಿಗ್ವಿಜಯ ಸಿಂಗ್ ಹೇಳಿಕೆ ಅವರ ವೈಯಕ್ತಿಕ ಎಂದು ಕಾಂಗ್ರೆಸ್ ಜಾರಿಕೊಂಡಿದೆ. ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಕರ್ಕರೆ ಅವರ ಪತ್ನಿ ಕವಿತಾ ಕರ್ಕರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಬೆದರಿಕೆ ಕರೆಗಳು ನಮ್ಮ ಮನೆಗೆ ಬಂದಿರಲಿಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆ ಪಾಕಿಸ್ತಾನಕ್ಕೆ ಅನುಕೂಲವಾಗುವ ರೀತಿಯಲ್ಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

26/11ರ ಸಂಜೆ 6ರಿಂದ 7ರ ನಡುವೆ ತಾನು ಕರ್ಕರೆಯವರ ಜತೆ ಸುಮಾರು ಮೂರುವರೆ ತಾಸುಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದೆನು. ಅವರು ಈ ಸಂದರ್ಭದಲ್ಲಿ ತನಗೆ ಹಿಂದೂ ಸಂಘಟನೆಯೊಂದರಿಂದ ಜೀವ ಬೆದರಿಕೆಯಿದೆ ಎಂದು ಹೇಳಿದ್ದರು. ಇದಾದ ಎರಡು ಗಂಟೆಯಲ್ಲಿ ಅವರು ಹತ್ಯೆಯಾದರೆಂದು ತಿಳಿದಾಗ ತನಗೆ ಭಾರೀ ಆಘಾತವಾಯಿತು ಎಂದು ದಿಗ್ವಿಜಯ್ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದರು.

ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಹೇಮಂತ್ ಕರ್ಕರೆ ಅವರಿಗೆ ಕೆಲ ಹಿಂದೂ ಸಂಘಟನೆಗಳಿಂದ ಬೆದರಿಕೆ ಬರುತ್ತಿದ್ದವು. ಈ ಕುರಿತು ನನ್ನೊಡನೆ ಹಂಚಿಕೊಂಡಿದ್ದರು ಎಂದು ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

English summary
An embarrassed Congress has chosen to distance itself from party general secretary Digvijay Singh"s controversial comments that he had a conversation with former Mumbai Anti-Terrorist Squad (ATS) chief Hemant Karkare shortly before he was killed by terrorists on 26/11. Karkare had apparently told Singh that he feared for his safety from Hindu extremists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X