600 ವಿಕೆಟ್‌ಗಳ ಸ್ಪಿನ್ ಚತುರ ಗದಗಿನ ಜೋಶಿ

ಬರೋಡಾ ವಿರುದ್ಧ ಕರ್ನಾಟಕ 88 ರನ್ನುಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಲು ಅವರ ಸ್ಪಿನ್ ಮೋಡಿ ಪ್ರಮುಖ ಪಾತ್ರ ವಹಿಸಿತು. ಕಳೆದ ತಿಂಗಳು ಬೆಂಗಳೂರಿನಲ್ಲಿ ಒಡಿಶಾ ಪಂದ್ಯದ ಸಂದರ್ಭದಲ್ಲಿ ರಣಜಿ ಕ್ರಿಕೆಟ್‌ನಲ್ಲಿ 450 ವಿಕೆಟ್‌ಗಳ ಗಡಿ ದಾಟಿದ್ದ ಅವರು, ಪ್ರಥಮ ದರ್ಜೆ ಪಂದ್ಯಗಳಲ್ಲಿ 600 ವಿಕೆಟ್ ಸಾಧನೆಯ ಮೈಲಿಗಲ್ಲನ್ನು ಮುಟ್ಟಿದ್ದಾರೆ.
ರಣಜಿ ಕ್ರಿಕೆಟ್‌ನಲ್ಲಿ 464, ಟೆಸ್ಟ್ ಕ್ರಿಕೆಟ್‌ನಲ್ಲಿ 41, ದುಲೀಪ್ ಟ್ರೋಫಿಯಲ್ಲಿ 58, ಇರಾನಿ ಟ್ರೋಫಿಯಲ್ಲಿ 6 ಮತ್ತು ಇತರೆ ಪಂದ್ಯಗಳಲ್ಲಿ 31 ವಿಕೆಟ್‌ಗಳನ್ನು ಗಳಿಸಿದ್ದಾರೆ. ಹರಿಯಾಣಾದ ರಾಜೇಂದ್ರ ಗೋಯೆಲ್ 750 ಗಳಿಸಿರುವುದು ಪ್ರಥಮ ದರ್ಜೆ ಕ್ರಿಕೆಟ್‌ನ ದಾಖಲೆಯಾಗಿದೆ.
ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು
ಗುರುವಾರ ಸಂಜೆ ತಮ್ಮ ಸಾಧನೆ ಬಗ್ಗೆ ಖುಷಿಯಿಂದ ಮಾತನಾಡಿದ ಜೋಶಿ, ಈ ಋತುವಿನಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲಬೇಕು ಎನ್ನುವುದೇ ನನ್ನ ಕನಸು. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದ್ದು ಸಂತಸ ತಂದಿದೆ. ಪೂರ್ಣ ಅಂಕಗಳೊಡನೆ ಪಂದ್ಯ ಗೆಲ್ಲುವುದು ನಮ್ಮ ಗುರಿ ಎಂದರು.
ಗದಗ ಮೂಲದ 40ರ ಹರೆಯದ ಜೋಶಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ 1992ರ ಡಿಸೆಂಬರ್‌ನಲ್ಲಿ ಹೈದರಾಬಾದ್ ವಿರುದ್ಧದ ರಣಜಿ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಭಾರತದ ಪರ 15 ಟೆಸ್ಟ್ ಪಂದ್ಯಗಳನ್ನು ಆಡಿ 41 ವಿಕೆಟ್ ಗಳಿಸಿದ್ದಾರೆ.












Click it and Unblock the Notifications