ಚಂಪಾಷಷ್ಠಿ ಮಡೆಸ್ನಾನಕ್ಕೆ ಕುಕ್ಕೆ ಸುಬ್ರಮಣ್ಯ ಸಜ್ಜು

ನಡೆಯುವುದೇ ಮಡೆಸ್ನಾನ: ಬ್ರಾಹ್ಮಣರು ಊಟ ಮಾಡಿ ಎಸೆದ ಎಂಜಲೆಲೆಯ ಮೇಲೆ ಉಪವಾಸವ್ರತ ಭಕ್ತರು ಮಡೆಸ್ನಾನ ಮಾಡಿದರೆ ಅವರಿಗೆ ಅಂಟಿಕೊಂಡಿರುವ ಚರ್ಮರೋಗ ಇತ್ಯಾದಿಗಳು ನಿವಾರಣೆಯಾಗುತ್ತದೆ ಎಂದು ಜನರು ನಂಬಿ ಈ ಆಚರಣೆ ಮಾಡುತ್ತಾರೆ, ದೇವಸ್ಥಾನದ ಒಳಾಂಗಣದಲ್ಲಿ ಷಷ್ಠಿ ಉತ್ಸವದ ಸಂದರ್ಭದಲ್ಲಿ ಈ ಸೇವೆ ನಡೆಯುತ್ತದೆ.
ಮಡೆಸ್ನಾನ(ಉರುಳು ಸೇವೆ) ಮಾಡಲು ಇಚ್ಛಿಸಿದವರು ಮಾತ್ರ ಆ ಸೇವೆ ಮಾಡಬಹುದು. ಇದಕ್ಕೆ ದೇಗುಲದ ಆಡಳಿತ ಮಂಡಳಿ ಯಾವುದೇ ಸೇವಾ ಶುಲ್ಕ ವಿಧಿಸುವುದಿಲ್ಲ. ದೇಗುಲದಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಕುಮಾರಧಾರಾ ನದಿಯಿಂದ ದೇವಳದವರೆಗೂ ಬೀದಿಯಲ್ಲಿ ಉರುಳಿಕೊಂಡು ಹೋಗಿ ಹರಕೆ ತೀರಿಸುವುದುಂಟು.
ಪಂಚಮಿ ದಿನದಂದು ಉಮಾಮಹೇಶ್ವರ ದೇವರನ್ನುಳ್ಳ ರಥವನ್ನು ನಾಗರ ಬೆತ್ತ ಬಳಸಿ ಎಳೆಯಲಾಗುತ್ತದೆ, ರಥೋತ್ಸವದ ನಂತರ ಷಷ್ಠಿಕಟ್ಟೆಯಲ್ಲಿ ಉಮಾಮಹೇಶ್ವರ ಹಾಗೂ ಸುಬ್ರಮಣ್ಯ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದೇವಳದ ಒಳಾಂಗಣದಲ್ಲಿ ನಡೆಯುವ ಮಡೆಸ್ನಾನದಲ್ಲಿ ಸಾವಿರಾರು ಜನ ಪಾಲ್ಗೊಳ್ಳುತ್ತಾರೆ.
ಮಡೆಸ್ನಾನವು ಸುಮಾರು 400ವರ್ಷಗಳಷ್ಟು ಹಳೆಯದಾದ ಜನರ ನಂಬಿಕೆಯಲ್ಲಿ ಉಳಿದುಕೊಂಡು ಬಂದಿರುವ ಧಾರ್ಮಿಕ ಪದ್ಧತಿ., ಇದನ್ನು ತಕ್ಷಣ ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಇದು ಜನರೇ ಚಿಂತಿಸಬೇಕಾದ ವಿಚಾರ ಏಕಾಏಕಿ ಬದಲಾವಣೆ ಅಸಾಧ್ಯ ಎಂದು ಕುಕ್ಕೆ ಸುಬ್ರಮಣ್ಯದ ವಿದ್ಯಾ ಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ.












Click it and Unblock the Notifications