ಗೂಗಲ್ ಆಂಡ್ರ್ಯಾಡ್ ನೆಕ್ಸಸ್ ಆಗುವುದೇ ಸಕ್ಸಸ್?

Samsung-Google smartphone Nexus S
ಕ್ಯಾಲಿಫೋರ್ನಿಯಾ, ಡಿ. 8: ಇಂಟರ್ ನೆಟ್ ದಿಗ್ಗಜ ಗೂಗಲ್ ಸಂಸ್ಥೆ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತಿದೆ. ನೆಕ್ಸಸ್ ಎಸ್ ಸರಣಿಯ ಆಂಡ್ರ್ಯಾಡ್ ಮೊಬೈಲ್ ಗೆ ಹೊಸ ಆಪರೇಟಿಂಗ್ ಸಿಸ್ಟಮ್ ಜಿಂಜರ್ ಬ್ರೆಡ್ ಅಳವಡಿಸಿರುವುದು ವಿಶೇಷ. ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ಈ ಹೊಸ ಗೂಗಲ್ ಸ್ಮಾರ್ಟ್ ಫೋನ್ ಅನ್ನು ತಯಾರಿಸುತ್ತಿದೆ.

ನೆಕ್ಸಸ್ ಎಸ್ ನ ವಿಶೇಷತೆಗಳ ಪಟ್ಟಿಯಲ್ಲಿ ಎದ್ದು ಕಾಣುವುದು ಆಡ್ರ್ಯಾಂಡ್ ಹೊಸ ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಆವೃತ್ತಿ 2.3 ಬಳಕೆ. 4 ಇಂಚಿನ WVGA ಟಚ್ ಸ್ಕ್ರೀನ್ ದರ್ಶಕ ಹಾಗೂ 5 ಮೆಗಾ ಪಿಕ್ಸಲ್ ಕೆಮೆರಾ ಜೊತೆಗೆ LED ಫ್ಲಾಶ್ ಇದೆ. ವಿಡಿಯೋ ಕಾಲಿಂಗ್ ಸೌಲಭ್ಯ ಕೂಡ ಇದೆ.

512 MB RAM ಹಾಗೂ 16 ಜಿಬಿ ಅಂತರಿಕ ಮೆಮೋರಿ ಹೊಂದಿದ್ದು, 32 ಜಿಬಿ ತನಕ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. ಜಿಂಜರ್ ಬ್ರೆಡ್ OS ಮೂಲಕ ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುವ ಫೋನ್ ಆಗಿ ನೆಕ್ಸಸ್ ಎಸ್ ಪರಿವರ್ತಿತವಾಗಿದೆ. ಇದರ ಜೊತೆಗೆ ಜಿಪಿಎಸ್, ವೈಫೈ , ಇಂಟರ್ ನೆಟ್ ಕಾಲಿಂಗ್, 3G ಸೌಲಭ್ಯಗಳಿವೆ. ಆದರೆ, ಎಫ್ ಎಂ ರೇಡಿಯೋ ಲಭ್ಯವಿಲ್ಲ.

ನೆಕ್ಸಸ್ ಎಸ್ ವಿಶೇಷತೆಗಳು:

* 4.0 ಇಂಚು AMOLED WVGA (800 x 480) ಟಚ್ ಸ್ಕ್ರೀನ್
* 16 ಜಿಬಿ ಆಂತರಿಕ ಮೆಮೋರಿ
* 512 MB RAM
* 16 GB internal memory
* 512 MB RAM
* Quad-band ಜಿಸಿಎಂ: 850, 900, 1800, 1900
* Tri-band HSPA: 900, 2100, 1700
* ಬ್ಲೂಟೂಥ್ 2.1
* ವೈ-ಫೈ 802.11 b/g/n
* Quad-band GSM: 850, 900, 1800, 1900
* Tri-band HSPA: 900, 2100, 1700
* WiFi 802.11 b/g/n
* ಯುಎಸ್ ಬಿ 2.0
* 3.5ಎಂಎಂ ಹೆಡ್ ಫೋನ್ ಜ್ಯಾಕ್
* Anti-fingerprint display coating
* Internet Calling support (VoIP/SIP)
* ಲಿಥಿಯಂ ಇಯಾನ್ (Li-Ion) (1500 mAH) ಬ್ಯಾಟರಿ
* 6 ಗಂಟೆಗಳ ಟಾಕ್ ಟೈಮ್
* 129 ಗ್ರಾಂ ತೂಕ
* 4.0 inch WVGA (800 x 480) touchscreen display
* Super AMOLED
* 5 ಮೆಗಾ ಪಿಕ್ಸಲ್ ಕೆಮೆರಾ ಜೊತೆಗೆ LED ಫ್ಲಾಶ್
* ವಿಡಿಯೋ ಕಾಲಿಂಗ್ ಗೆ VGA ಕೆಮೆರಾ
* HD ಕ್ಯಾಮ್ ಕಾರ್ಡರ್
* ಆಂಡ್ರ್ಯಾಡ್ v2.3 ಜಿಂಜರ್ ಬ್ರೆಡ್
* 1GHz ಕೊರ್ಟೆಕ್ಸ್ A8(ಹಮ್ಮಿಂಗ್ ಬರ್ಡ್ ) ಪ್ರೊಸಸರ್

ಡಿ.16ರ ವೇಳೆಗೆ ಅಮೆರಿಕದಲ್ಲಿ ನೆಕ್ಸಸ್ ಸ್ಮಾರ್ಟ್ ಫೋನ್ ಲಭ್ಯವಾಗಲಿದೆ. ಇದು ಅನ್ ಲಾಕ್ಟ್ ಅವೃತ್ತಿಯಾಗಿದ್ದು, ಟಿ ಮೊಬೈಲ್ ಸೇವೆಗೂ ಲಭ್ಯವಿರುತ್ತದೆ. ನೆಕ್ಸಸ್ ಎಸ್ ಮೊಬೈಲ್ ಬೆಲೆ ಸರ್ವೀಸ್ ಯೋಜನೆ ಸಹಿತವಾದರೆ $199 ಇಲ್ಲದಿದ್ದರೆ $529, ಯುರೋಪಿಯನ್ ದೇಶಗಳಲ್ಲಿ €650 ಆಗಲಿದೆ. ಆದರೆ, ಭಾರತದಲ್ಲಿ ನೆಕ್ಸಸ್ ಎಸ್ ಯಾವಾಗ ಲಭ್ಯವಾಗಲಿದೆ ಎಂಬ ಮಾಹಿತಿ ಇನ್ನೂ ಸಂಸ್ಥೆ ಪ್ರಕಟಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+