ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡಿಸೇಲ್ 2 ರು. ಹೆಚ್ಚಳ?

By Mrutyunjaya Kalmat
|
Google Oneindia Kannada News

Petrol pump
ನವದೆಹಲಿ, ಡಿ. 8 : ವಾಹನ ಮಾಲೀಕರ ಮೇಲೆ ಮತ್ತಷ್ಟು ಹೊರೆ ಹಾಕಲು ನಿರ್ಧರಿಸಿರುವ ತೈಲ ಕಂಪನಿಗಳು, ಪೆಟ್ರೋಲ್ ಮತ್ತು ಡಿಸೇಲ್ ದರಗಳನ್ನು ಪ್ರತಿ ಲೀಟರ್ ಗೆ 2 ಹೆಚ್ಚಿಸಲು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್ ದರ ಇದೀಗ 90 ಡಾಲರ್ ಆಗಿದ್ದು, ಹೀಗಾಗಿ ಅನಿವಾರ್ಯವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರಗಳನ್ನು ಹೆಚ್ಚಿಸಲು ಪರಿಶೀಲನೆ ನಡೆಸಲಾಗಿದೆ ಎಂದು ಪ್ರಮುಖ ತೈಲ ಕಂಪನಿಯ ವಕ್ತಾರು ತಿಳಿಸಿದ್ದಾರೆ. ಕಳೆದ ನವೆಂಬರ್ ನಲ್ಲಿ ಪೆಟ್ರೋಲ್, ಡಿಸೇಲ್ ದರಗಳನ್ನು ಪ್ರತಿ ಲೀಟರ್ ಗೆ 32 ಪೈಸೆ ಹೆಚ್ಚಿಸಲಾಗಿತ್ತು.

ಆದರೆ, ಇತ್ತೀಚೆಗಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಕಂಡಿದ್ದರಿಂದ ತೈಲ ಬೆಲೆಯನ್ನು ಪ್ರತಿ ಲೀಟರ್ ಕನಿಷ್ಠ 2 ರುಪಾಯಿಗಳಷ್ಟು ಏರಿಸಲೇಬೇಕೆಂದು ಇಂಧನ ಇಲಾಖೆಗೆ ಮನವಿ ಸಲ್ಲಿಸಿದೆ. ಅಗತ್ಯ ವಸ್ತುಗಳ ಬೆಲೆ ಬಡವರ ಪಾಲಿಗೆ ಗಗನ ಕುಸುಮವಾಗಿದೆ. ಇದರ ಜೊತೆಗೆ ವಾಹನ ಸವಾರರಿಗೆ ಬರೆ ಹಾಕುವ ಚಿಂತನೆಯನ್ನು ತೈಲ ಕಂಪನಿಗಳು ನಡೆಸಿವೆ.

English summary
Oil companies are planning to raise petrol and diesel prices by Rs 2 a litre, a newspaper has reported on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X