ಲೋಕಾಯುಕ್ತರು ಪ್ರತಿಪಕ್ಷದ ನಾಯಕರಾ?
ಬೆಂಗಳೂರು,
ಡಿ. 8 : ರಾಜ್ಯದಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರತಿಪಕ್ಷ ನಾಯಕರಂತೆ ವರ್ತಿಸುತ್ತಿದ್ದು, ಈ ಹಿಂದೆ ರಾಜ್ಯಪಾಲರು ಇದೇ ರೀತಿ ವರ್ತಿಸುತ್ತಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಟೀಕಿಸಿದ್ದಾರೆ. id="toptextpromo">ಬಿಜೆಪಿ
ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಂಗಳವಾರ ಮಾತನಾಡಿರುವ ಗಡ್ಕರಿ, ಲೋಕಾಯುಕ್ತರು ಸರಕಾರಕ್ಕೆ ಕಂಟಕ ಪ್ರಾಯರಾಗಿರುವ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ರಾಜ್ಯ ಸರಕಾರದ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಮುಂದುವರಿಯಲಿದ್ದು, ಸರಕಾರ ದ ವಿರುದ್ಧ ಬಂದಿರುವ ಭೂ ಹಗರಣ ಆರೋಪಕ್ಕೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಮೂಲಕ ಉತ್ತರಿಸಲಾಗುವುದು ಎಂದು ಅವರು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಆಂತರಿಕ
ಸಮಸ್ಯೆ
:
ನಾಯಕತ್ವ
ಬದಲಾವಣೆ
ಮಾಡಬೇಕೆಂಬ
ಬೇಡಿಕೆ
ಬರುತ್ತಿರುವುದೇಕೆ
ಎಂಬ
ಪ್ರಶ್ನೆಗೆ,
ಇದು
ಪಕ್ಷದೊಳಗಿನ
ಆಂತರಿಕ
ಸಮಸ್ಯೆ.
ಪಕ್ಷದ
ವೇದಿಕೆಯಲ್ಲೇ
ಚರ್ಚಿಸಿ
ಪರಿಹಾರ
ಕಂಡುಕೊಳ್ಳ
ಲಾಗುವುದು.
ಬಹಿರಂಗ
ಚರ್ಚೆ
ಮಾಡುವ
ಅಗತ್ಯವಿಲ್ಲ
ಎಂದು
ಹಾರಿಕೆ
ಉತ್ತರ
ನೀಡಿದರು.
ಸಚಿವ
ಸಂಪುಟ
ವಿಸ್ತರಣೆ
ಕುರಿತ
ಪ್ರಶ್ನೆಗೆ
ಉತ್ತರಿಸಿದ
ಅವರು,
ಸ್ಥಳೀಯ
ಆಡಳಿತ
ಚುನಾವಣೆ
ಬಳಿಕ
ಈ
ಬಗ್ಗೆ
ಪರಿಶೀಲನೆ
ನಡೆಸಲಾಗುವುದು
ಎಂದು
ಹೇಳಿದರು.












Click it and Unblock the Notifications