ವಾರಣಾಸಿ ಸ್ಫೋಟ : ಇಂಡಿಯನ್ ಮುಜಾಹಿದೀನ್ ಕೈವಾಡ

1992ರಲ್ಲಿ ನಡೆದ ಬಾಬರಿ ಮಸೀದಿ ದ್ವಂಸಗೊಳಿಸಿದ ಪ್ರಕರಣಕ್ಕೆ ಪ್ರತೀಕಾರವಾಗಿ ತಾನು ಈ ಸ್ಫೋಟ ನಡೆಸಿದ್ದು, ಸದ್ಯದಲ್ಲೇ ಮತ್ತಷ್ಟು ದಾಳಿಗಳನ್ನು ನಡೆಸುವುದಾಗಿ ಐಎಂ ಸಂಘಟನೆ ಮುಂಬೈನಿಂದ ಮಾಧ್ಯಮ ಕಚೇರಿಗಳಿಗೆ ರವಾನಿಸಿದ ಇ-ಮೇಲ್ ಸಂದೇಶದಲ್ಲಿ ತಿಳಿಸಿದೆ.
ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಮತ್ತು ಗೋಧ್ರಾ ಗಲಭೆ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ನೇಮಕಗೊಳಿಸಿದ ವಿಶೇಷ ತನಿಖಾ ತಂಡ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿರುವ ವಿಷಯದ ಕುರಿತು ಇ-ಮೇಲ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಏಟಿಗೆ ತಕ್ಕುದಾದ ಪ್ರತಿಯೇಟು ನೀಡುವ ಕುರಿತ ನ್ಯೂಟನ್‌ನ ತೃತೀಯ ಸಿದ್ಧಾಂತವನ್ನು ನಮ್ಮದೇ ದಾಟಿಯಲ್ಲಿ ನಿರೂಪಿಸುವ ಸಾಮರ್ಥ್ಯವನ್ನು ನಾವು ಈಗ ಹೊಂದಿದ್ದೇವೆ. ಗುರಿ ಸಾಧಿಸಿ ನಮ್ಮ ಹಿರಿಯರನ್ನು ಸಮಾಧಾನಪಡಿಸುವ ಸಾಮರ್ಥ್ಯ ನಮ್ಮ ಯುವಕರಿಗಿದೆ. ಭಾರತದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿರುವ ಕುರಿತು ಮುಸ್ಲಿಂ ರಾಷ್ಟ್ರಗಳು ಧ್ವನಿಯೇರಿಸಬೇಕು ಎಂದು ಇಂಡಿಯನ್ ಮುಜಾಹಿದೀನ್ ಆಗ್ರಹಿಸಿದೆ. ಮಂಗಳವಾರ ವಾರಣಾಸಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಒಬ್ಬ ಬಾಲಕಿ ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿದ್ದಾರೆ.












Click it and Unblock the Notifications