ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂದಾಪುರದಲ್ಲಿ ವರದಕ್ಷಿಣೆ ಪೀಡಕನ ವಿರುದ್ಧ ನಿಂತ ಪತ್ನಿ

By Mahesh
|
Google Oneindia Kannada News

Dowry Case against Lecturer Chenna Poojari
ಕುಂದಾಪುರ, ಡಿ.8 : ಇಲ್ಲಿನ ಭಂಡಾರ್ ಕರಸ್ಸ್ ಆರ್ಟ್ಸ್ ಹಾಗೂ ಸೈನ್ಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿರುವ ಚೆನ್ನ ಪೂಜಾರಿ ಹಾಗೂ ಆತನ ಪ್ರೇಯಸಿ ಮೈಸೂರಿನ ಡಾ. ರೇಖಾ ಎನ್ನುವವರ ವಿರುದ್ಧ ವರದಕ್ಷಿಣೆ ಪೀಡನೆ ಹಾಗೂ ಕೊಲೆ ಬೆದರಿಕೆ ಬಗ್ಗೆ ಪೂಜಾರಿ ಪತ್ನಿ ಮಮತಾ ನೀಡಿರುವ ದೂರನ್ನು ಪರಿಗಣಿಸಿರುವ ಕುಂದಾಪುರ ನ್ಯಾಯಾಲಯ ಪ್ರಕರಣ ದಾಖಲಾಗಿಸಿದೆ.

ಕುಂದಾಪುರ ನಾನಾ ಸಾಹೇಬ್ ರಸ್ತೆಯ ನಿವಾಸಿ ಚೆನ್ನ ಪೂಜಾರಿ ಎಂಬವರ ವಿವಾಹ ಕಾನೂನು ಪದವೀಧರೆ ಮಮತಾಳೊಂದಿಗೆ 18-11-1996 ರಂದು ಕುಂದಾಪುರದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಇವರಿಗೆ ಒಬ್ಬಳು ಮಗಳು ಇದ್ದಾಳೆ. ಚೆನ್ನಪೂಜಾರಿ ಮದುವೆ ವೇಳೆ ರೂ.1,55,000 ವರದಕ್ಷಿಣೆಯನ್ನು ಪಡೆದಿದ್ದರು. ನಂತರ ಹೆಚ್ಚಿನ ವರದಕ್ಷಿಣೆಗಾಗಿ ಪತ್ನಿ ಮಮತಾರನ್ನು ಪೀಡಿಸುತ್ತಿದ್ದರು.

ಅನೈತಿಕ ಸಂಬಂಧ ಮನೆಗೆ : ಮಾವನಿಂದ ಪಡೆದ ಜಾಗದಲ್ಲಿ ನೂತನ ಮನೆ ಕಟ್ಟಿಸಿದ ಚೆನ್ನ ಪೂಜಾರಿ ಪತ್ನಿ ಪೀಡನೆಯನ್ನು ಮುಂದುವರಿಸಿದ್ದನು. ನಂತರ ಮೈಸೂರಿನ ಮನ ಶಾಸ್ತ್ರಜ್ಞೆ ಎಂದು ಹೇಳುವ ಡಾ.ರೇಖಾ ಎಂಬಾಕೆಯನ್ನು ಮನೆಗೆ ಕರೆತಂದ ಉಪನ್ಯಾಸಕ ಆಕೆಯೊಂದಿಗೆ ಪತ್ನಿಯ ಸಮಕ್ಷಮವೇ ಅನೈತಿಕ ನಡವಳಿಕೆಯನ್ನು ಹೊಂದಿ ಪತ್ನಿಗೆ ವಂಚಿಸಿದ್ದನು. ಆರೋಪಿಗಳಿಬ್ಬರೂ ಸೇರಿ ಮಮತಾರಿಗೆ ಬೈದು ಬೆದರಿಕೆಯನ್ನು ಹಾಕಿದ್ದರು.

ಈ ಬಗ್ಗೆ ಮಮತಾ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮುಖಾಂತರ ಸಲ್ಲಿಸಿರುವ ದೂರನ್ನು ಸ್ವೀಕರಿಸಿರುವ ದೂರನ್ನು ನ್ಯಾಯಧೀಶೆ ಹೇಮಲತಾ ಬಸಪ್ಪನವರು ಪ್ರಕರಣದ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಕುಂದಾಪುರದ ಪೊಲೀಸರಿಗೆ ಆದೇಶಿಸಿದ್ದಾರೆ.

English summary
Kundapura local Court has directed police to file a dowry harassment case against Bhandarkar"s Art and Science College Economics lecturer Chenna Poojari. His wife Mamta who is law degree holder also alleged and filed complaint that Poojari is having an illegal affair with Dr.Rekha of Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X