ಅನುಷಾಗೆ ಕಾರ್ಕಳದಲ್ಲಿ ಒಬ್ಬ, ಮುಂಬೈನಲ್ಲಿ ಮತ್ತೊಬ್ಬ

ಈಕೆಗೆ ಕಳೆದ ನ.14ರಂದು ಕಾರ್ಕಳದ ರಾಧಾಕೃಷ್ಣ ಸಭಾಭವನದಲ್ಲಿ ಯಾವುದೇ ಅಡೆತಡೆಯಿಲ್ಲದೆ ಯರ್ಲಪಾಡಿಯ ಸಂದೀಪ್ ಜೊತೆ ಮದುವೆಯೂ ನಡೆದಿತ್ತು. ಆ ನಂತರ ಈಕೆ ತವರಿನಲ್ಲಿ ಇದ್ದಳು. ಮೈಸೂರಿನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಸಂದೀಪ್ ತನ್ನ ಪತ್ನಿಯ ಜೊತೆ ನ.30ರಂದು ಮೈಸೂರಿಗೆ ತೆರಳಲು ನಿರ್ಧರಿಸಿದ್ದರು. ಈ ನಡುವೆ ನ.29ರಂದು ಅನುಷಾ ತಾನು ಪೇಟೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈಕೆ ನೇರವಾಗಿ ಹಳೇ ಗಂಡ ಮಹಮ್ಮದ್ ರಹೇನನಲ್ಲಿ ತೆರಳಿದ್ದಳು. ಆಕೆ ರಹೇನ್ ಜೊತೆ ಮುಂಬೈಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅದರಂತೆ ಅಲ್ಲಿಗೆ ಹೋಗಿ ಆಕೆಯನ್ನು ಕಾರ್ಕಳಕ್ಕೆ ಕರೆ ತರಲಾಯಿತು. ಅನುಷಾ ತಾನು ಸಂದೀಪರನ್ನು ಮದುವೆಯಾಗುವ ಮೊದಲೇ ಮಹಮ್ಮದ್ ರಹೇನರನ್ನು ಮದುವೆಯಾಗಿದ್ದು, ಆತನ ಜೊತೆ ಇರುತ್ತೇನೆ ಎಂದು ಹೇಳಿದ್ದರಿಂದ ಪೊಲೀಸರು ಆಕೆಯನ್ನು ಆತನ ಜೊತೆ ಕಳುಹಿಸಿಕೊಡಲು ನಿರ್ಧರಿಸಿದ್ದಾರೆ.












Click it and Unblock the Notifications