ಮಲ್ಲೇಶ್ವರಂ ಮದುವೆ ಮನೆಯಲ್ಲಿ ಮೂವರ ಕೊಲೆ

ಗಾಯತ್ರಿ ನಗರದ ಕುಖ್ಯಾತ ರೌಡಿ ಲಂಬೂ ನಟರಾಜ್, ಆತನ ಸಹಚರರಾದ ಭರತ್‌ರಾಜ್ ಮತ್ತು ರವಿ ಕೊಲೆಯಾದವರು. ಇವರ ಎದುರಾಳಿ ಗುಂಪಿನವರಾದ ಪ್ರಶಾಂತ್ ಎಂಬಾತನ ಸ್ನೇಹಿತ ಶ್ರೀನಿವಾಸ್ ಎಂಬುವರ ಸಹೋದರಿಯ ಆರತಕ್ಷತೆ ಸಮಾರಂಭ ಈ ಹೋಟೆಲ್‌ನಲ್ಲಿ ನಡೆಯುತ್ತಿತ್ತು.
ಪ್ರಶಾಂತ್ ಮತ್ತು ಆತನ ಸಹಚರ ಪ್ರಭು ಎಂಬುವರನ್ನು ಕೊಲೆ ಮಾಡುವ ಸಲುವಾಗಿ ಲಂಬೂ ನಟರಾಜ್ ತನ್ನ ಸಹಚರರೊಂದಿಗೆ ಈ ಹೋಟೆಲ್‌ಗೆ ನುಗ್ಗಿದರು. ಈ ಸಂದರ್ಭದಲ್ಲಿ ಎರಡೂ ಗುಂಪಿನವರ ನಡುವೆ ಮಾರಾಮಾರಿ ನಡೆದು ಪ್ರಶಾಂತ್‌ನ ಕಡೆಯುವರು ಆ ಮೂವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ 'ಘಟನೆ ಸಂಬಂಧ ಪ್ರಶಾಂತ್, ಪ್ರಭು ಸೇರಿದಂತೆ ಮೂರು ಮಂದಿಯನ್ನು ಬಂಧಿಸಲಾಗಿದೆ.
ಕೊಲೆಯಾದವರು ಹಾಗೂ ಕೊಲೆ ಆರೋಪಿಗಳು ಈ ಹಿಂದೆ ರೌಡಿ ಸೈಲೆಂಟ್ ರವಿಯ ಸಹಚರರಾಗಿದ್ದರು. ಆದರೆ ವ್ಯವಹಾರದ ವಿಷಯವಾಗಿ ಪರಸ್ಪರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಉಭಯ ಗುಂಪಿನವರ ನಡುವೆ ದ್ವೇಷ ಮೂಡಿತ್ತು. ಈ ಕಾರಣದಿಂದಲೇ ಇವರ ಕೊಲೆಯಾಗಿದೆ" ಎಂದು ತಿಳಿಸಿದರು.












Click it and Unblock the Notifications