Get Updates
Get notified of breaking news, exclusive insights, and must-see stories!

ಸಚಿನ್ ಅಸಾಮಾನ್ಯ ಆಟಗಾರ : ಆಫ್ರಿದಿ

Shahid Afridi
ನವದೆಹಲಿ, ಡಿ. 2 : ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರ. ವರ್ಷಗಳು ಉರುಳಿದಂತೆಲ್ಲಾ ಅವರಿಗೆ ರನ್ ದಾಹ ಹೆಚ್ಚಾಗುತ್ತಲೇ ಇದೆ. ಕಳೆದ 20 ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಅವರಿಗೆ 2011ರ ವಿಶ್ವಕಪ್ ಕೊನೆಯದಾಗಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ ವಿಶ್ವಕಪ್ ಗೆಲ್ಲುವ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗಲು ಅವರು ಕನಸು ಕಾಣುತ್ತಿರುವುದು ಸಹಜ. ಅವರ ಬಗ್ಗೆ ಇತರ ತಂಡಗಳು ವಿಶೇಷ ಕಾಳಜಿ ವಹಿಸಬೇಕಾಗಿದೆ. ಅನಿವಾರ್ಯ ಕಾರಣಗಳಿಂದ ಪಾಕಿಸ್ತಾನ ವಿಶ್ವಕಪ್ ಆತಿಥ್ಯ ವಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟು ಮಾಡಿದೆ. ಅಭಿಮಾನಿಗಳಿಗೆ ಇನ್ನಷ್ಟು ನಿರಾಶೆ ಉಂಟು ಮಾಡದೆ, ವಿಶ್ವಕಪ್ ಗೆಲ್ಲುವ ನಿಟ್ಟಿನಲ್ಲಿ ತಂಡವನ್ನು ಮುನ್ನೆಡಸಲಾಗುವುದು ಎಂದು ಆಫ್ರಿದಿ ಹೇಳಿದ್ದಾರೆ.

ಪಾಕಿಸ್ತಾನ ಈಗಾಗಲೇ ಭಾರೀ ನಷ್ಟ ಅನುಭವಿಸಿದೆ. ನೆರೆ ಹಾವಳಿ, ಪ್ರವಾಸೋದ್ಯಮ ಮತ್ತು ಕ್ರಿಕೆಟ್‌ ನಲ್ಲಿ ಕಂಡು ಬಂದ ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ಬಹಳಷ್ಟು ಕಳೆದುಕೊಂಡಿದೆ. ಆದರೆ, ಏಷ್ಯನ್ ಗೇಮ್ಸ್‌ ನಲ್ಲಿ ಪಾಕ್‌ ನ ಹಾಕಿ ತಂಡ ಚಿನ್ನ ಗೆದ್ದಿರುವುದು ಪಾಕ್‌ ನ್ನು ಆಘಾತದಿಂದ ಚೇತರಿಸುವಂತೆ ಮಾಡಿದೆ. ಏನೇ ಆಗಲಿ ವಿಶ್ವಕಪ್‌ನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ಅಫ್ರಿದಿ ಹೇಳಿದರು.

ಪಾಕಿಸ್ತಾನ ಕ್ರಿಕೆಟ್‌ ನಲ್ಲಿ ವಿವಾದ ನಿತ್ಯನೂತನವಾಗಿದ್ದರೂ, ಈ ವಿಚಾರ ಆಟಗಾರರ ನೈತಿಕತೆಯ ಮೇಲೆ ಅಥವಾ ತಂಡದ ಮೇಲೆ ಪರಿಣಾಮ ಬೀರದು. ಮುಂದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಫೆವರೀಟ್ ತಂಡಗಳಲ್ಲಿ ಒಂದಾಗಿದೆ ಪಾಕಿಸ್ತಾನ ಕ್ರಿಕೆಟ್ ತಂಡ ಸರಣಿ ವಿವಾದವನ್ನು ಎದುರಿಸುತ್ತಿದೆ. ಪ್ರಸ್ತುತ ತಂಡದ ಏಳು ಆಟಗಾರರ ಮೇಲೆ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಈ ಪೈಕಿ ಮೂವರನ್ನು ಐಸಿಸಿ ಅಮಾನತು ಮಾಡಿದೆ. ಪರಿಸ್ಥಿತಿ ಹೀಗಿದ್ದರೂ ಮುಂದಿನ ವಿಶ್ವಕಪ್‌ನಲ್ಲಿ ಪಾಕ್ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+