ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರಪ್ಪ ಅವರ ಬಂಗಲೆ ಜಪ್ತಿಗೆ ಕೋರ್ಟ್ ಆದೇಶ

By Mahesh
|
Google Oneindia Kannada News

Bangarappa buildings up for auction
ಬೆಂಗಳೂರು, ಡಿ. 1: ಕರ್ನಾಟಕ ಸಣ್ಣ ಕೈಗಾರಿಕಾ ನಿಗಮದಿಂದ ಸಾಲ ಪಡೆದು ಸಾಲಮರುಪಾವತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ತಮ್ಮ ಪುತ್ರರಿಗಾಗಿ ಅವರು ಮಾಡಿದ್ದ ಸಾಲ ತೀರಿಸದ ಕಾರಣ ಅವರಿಗೆ ಸೇರಿದ ಸುಮಾರು 70 ಕೋಟಿ ರು ಬೆಲೆಬಾಳುವ ಬೆಂಗಳೂರಿನಲ್ಲಿರುವ ಎರಡು ಬೃಹತ್ ಬಂಗಲೆಗಳು ಹರಾಜಿಗೆ ಇಡಲಾಗಿದೆ.

1993 ರಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಸೇರಿದ ಅಕಾಶ್ ಆಡಿಯೋ ಕಂಪನಿ ಹೆಸರಿನಲ್ಲಿ ಕೆ.ಎಸ್.ಎಸ್ ಐ.ಡಿ.ಸಿ. ಯಿಂದ ಸುಮಾರು 1.14 ಕೋಟಿ ರೂ. ಸಾಲ ಪಡೆಯಲಾಗಿದ್ದು, ಸಾಲ ಮರುಪಾವತಿ ಆಗಿರಲಿಲ್ಲ.ಈ ಸಾಲಕ್ಕೆ ಮಲ್ಲೇಶ್ವರಂನಲ್ಲಿರುವ ಲಾವಣ್ಯ ಟವರ್ಸ್ ಹಾಗೂ ಸದಾಶಿವನಗರದಲ್ಲಿರುವ ಶ್ರೀರೇಣುಕಾಂಬ ಕಟ್ಟಡವನ್ನು ಅಡಮಾನ ಇಟ್ಟಿದ್ದರು. ಸಾಲದ ಮೂಲಧನ, ಬಡ್ಡಿ, ಚಕ್ರಬಡ್ಡಿ ಎಲ್ಲಾ ಸೇರಿ ಈವರೆಗೆ 3.70 ಕೋಟಿ ರು.ಗಳಾಗಿವೆ ಎಂದು ಕೆಎಸ್ ಎಸ್ ಐಡಿಸಿ ದೂರಿದೆ.

ಈ ಪ್ರಕರಣ ನ್ಯಾಯಾಲಯದ ಮಟ್ಟಿಲೇರಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ನಗರದ ಸಿವಿಲ್ ನ್ಯಾಯಾಲಯ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬಂಗಾರಪ್ಪನವರಿಗೆ ಸೇರಿದ ಸದಾಶಿವನಗರದ ಮನೆ ಹಾಗೂ ಕುಮಾರಪಾರ್ಕ್‌ನಲ್ಲಿರುವ ಆಕಾಶ್ ಆಡಿಯೊ ಕಂಪನಿ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದೆ.

English summary
Former CM S Bangarappa’s two buildings, Renukamba, Lavanya Towers in Malleswaram are up for auction. Two building worth around Rs. 70Cr had been provided as surety for KSSIDC loan to Bangarappa"s son Madhu to build Akash Audio Company in 1993. Since, Bangarappa has failed to clear the loan. The apex court ordered the KSSIDC to auction the two buildings to recover the money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X