• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಮೊಗ್ಗ ಅಕ್ರಮ ದೇಗುಲಗಳ ತೆರವಿಗೆ ಡೆಡ್‌ಲೈನ್: ಪೊನ್ನುರಾಜ್

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|

ಶಿವಮೊಗ್ಗ, ಡಿ.2: ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳ ತೆರವಿಗೆ ಡಿಸೆಂಬರ್ 7 ಅಂತಿಮ ಗಡುವು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪೊನ್ನುರಾಜ್ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.7ರ ನಂತರ ಜಿಲ್ಲಾಡಳಿತವೇ ದೇವಾಲಯಗಳ ತೆರವಿಗೆ ಮುಂದಾಗಲಿದೆ ಎಂದು ಹೇಳಿದರು.

ಸುಪ್ರೀಂಕೋರ್ಟ್‌ನ ಆದೇಶ ದಂತೆ 2009ಕ್ಕೂ ಪೂರ್ವದಲ್ಲಿ ರಸ್ತೆ ಮಧ್ಯೆ, ಪಕ್ಕ ಇಲ್ಲವೇ ಉದ್ಯಾನ ವನಗಳಲ್ಲಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳಿಂದ ಸಾರ್ವಜಕರಿಗೆ ತೊಂದರೆಯಾಗುತ್ತಿದ್ದರೆ ಡಿ.15 ರೊಳಗೆ ಅವುಗಳನ್ನು ತೆರವು ಮಾಡಬೇಕು. ಇಲ್ಲದಿದ್ದರೆ ಇದಕ್ಕೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ 38 ಪ್ರಾರ್ಥನಾ ಮಂದಿರಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಇವುಗಳ ಪೈಕಿ ಕೇವಲ 15ಕ್ಕೆ ಮಾತ್ರ ಸಂಬಂಧ ಪಟ್ಟವರು ಉತ್ತರ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪ್ರತಿ ತಾಲೂಕುಗಳಲ್ಲಿಯೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಸಾರ್ವಜನಿಕರಿಂದ ಅನಧಿಕೃತ ಪ್ರಾರ್ಥನಾ ಮಂದಿರಗಳಿಗೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಲಿದ್ದಾರೆ. ಈ ವಿಷಯದಲ್ಲಿ ಸಾರ್ವಜನಿಕರು ಯಾವುದೇ ಭಾವಾವೇಶಕ್ಕೆ ಒಳಗಾಗದೇ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಒಂದು ವೇಳೆ ಸಾರ್ವಜನಿಕರು ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವಿಗೆ ಸಹಕರಿಸಿದರೆ ಅವರು ಸೂಚಿಸುವ ಸ್ಥಳ ಯೋಗ್ಯವಾಗಿದ್ದರೆ ಅಲ್ಲಿ ನೂತನವಾಗಿ ಧಾರ್ಮಿಕ ಮಂದಿರಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗು ವುದು. ಇದರಿಂದ ಪ್ರಾರ್ಥನಾ ಮಂದಿರದ ಜೀರ್ಣೋಧ್ದಾರವೂ ಅದಂತಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In order obey the SC order Shivamogga DC Ponnuraj has given dead line date Dec.7 to illegal temple owners. Earlier the Supreme Court has directed chief secretaries of state governments and District Commissioners to furnish details of unauthorized religious structures in public places. and demolish the illegal buildings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more