ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರ್ ಪ್ರತಾಪ್ ಸಿಂಗ್ ಸಿಬಿಐ ನೂತನ ನಿರ್ದೇಶಕ

By Mahesh
|
Google Oneindia Kannada News

AP singh, CBI director, source: NDTV
ನವದೆಹಲಿ, ಡಿ.1:ಹಿರಿಯ ಐಪಿಎಸ್ ಅಧಿಕಾರಿ ಅಮರ್ ಪ್ರತಾಪ್ ಸಿಂಗ್ ಅವರು ಎರಡು ವರ್ಷಗಳ ಅವಧಿಗೆ ಸಿಬಿಐನ ನೂತನ ನಿರ್ದೇಶಕರಾಗಿ ಮಂಗಳವಾರ ನೇಮಕಗೊಂಡಿದ್ದಾರೆ. ಅವರು ಅಶ್ವಿನಿ ಕುಮಾರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯ ನೇಮಕಾತಿಗಳ ಸಂಪುಟ ಸಮಿತಿಯು ಜಾರ್ಖಂಡ್ ಕೇಡರ್‌ನ 1974ರ ತಂಡದ ಐಪಿಎಸ್ ಅಧಿಕಾರಿ ಸಿಂಗ್‌ರನ್ನು ಈ ಪ್ರತಿಷ್ಠಿತ ಹುದ್ದೆಗೆ ನೇಮಕಗೊಳಿಸಿತು.

ಸಿಬಿಐನ ವಿಶೇಷ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಂಗ್ ಬಿಎಸ್‌ಎಫ್‌ನ ಹೆಚ್ಚುವರಿ ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಪೊಲೀಸ್ ಪದಕ ಮತ್ತು ರಾಷ್ಟ್ರಪತಿಳ ಪೊಲೀಸ್ ಪದಕ ಪುರಸ್ಕೃತರಾಗಿದ್ದಾರೆ. ಮಂಗಳವಾರ ತನ್ನ ಎರಡು ವರ್ಷ ನಾಲ್ಕು ತಿಂಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಅಶ್ವನಿ ಕುಮಾರ್ 2008, ಆಗಸ್ಟ್ 8ರಂದು ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದರು.

1963ರಲ್ಲಿ ಆರಂಭವಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆ ಸ್ಟಿಗೇಷನ್ (ಸಿಬಿಐ)ಇಲಾಖೆಯ 24 ನೇ ನಿರ್ದೇಶಕರಾಗಿ 58 ವರ್ಷದ ಅಮರ್ ಪ್ರತಾಪ್ ಸಿಂಗ್ ಕಾರ್ಯ ನಿರ್ವಹಿಸಲಿದ್ದಾರೆ. ರಾಷ್ಟ್ರಪತಿಗಳ ಪೊಲೀಸ್ ಪದಕ ಹಾಗೂ ಭಾರತೀಯ ಪೊಲೀಸ್ ಪದಕವನ್ನು ಸಿಂಗ್ ಗಳಿಸಿದ್ದಾರೆ. ಸದ್ಯ ಬಹುಕೋಟಿ ಕಾಮನ್ ವೆಲ್ತ್ ಗೇಮ್ಸ್ ಹಗರಣ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

English summary
IPS Officer Amar Pratap Singh as been appointed as new director of Central Bureau of Investigation(CBI) for the period of two years. 58-year-old A P Singh, a 1974 batch IPS officer from Jharkhand cadre. He takes charge as 24th director of the Central Bureau of Investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X