• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೋಲ್ಟ್ ಮೊಬೈಲ್ ಬ್ರೌಸರ್ ನಲ್ಲಿ ಭಾರತೀಯ ಭಾಷೆ ವೀಕ್ಷಿಸಿ

By Mahesh
|
ನವದೆಹಲಿ, ನ. 30: ಮೊಬೈಲ್ ನಲ್ಲಿ ಭಾರತೀಯ ಭಾಷೆ ಬಳಕೆ ಹೆಚ್ಚುತ್ತಿದ್ದಂತೆ ಹೊಸ ಹೊಸ ಸೌಲಭ್ಯಗಳು, ಅನ್ವಯ ತಂತ್ರಾಂಶಗಳನ್ನು ರೂಪಿಸಲಾಗುತ್ತಿದೆ. ಬಿಟ್ ಸ್ಟ್ರೀಮ್ ಕಂಪೆನಿ ಹೊಸ ಬೋಲ್ಟ್ ಮೊಬೈಲ್ ಬ್ರೌಸರ್ ಅನ್ನು ಪರಿಚಯಿಸಿದ್ದು ಇದು ಭಾರತೀಯ ಭಾಷೆಗಳನ್ನು ವೀಕ್ಷಿಸಲು ಅನುಕೂಲವಾಗಿದೆ. ಇಂಡಿಕ್ ಟೆಕ್ಸ್ ಬಳಕೆ ಹಾಗೂ ಬ್ರೌಸರ್ ಮೂಲಕ ಸ್ಪಷ್ಟವಾಗಿ ಭಾರತೀಯ ಭಾಷೆ ವೆಬ್ ತಾಣಗಳನ್ನು ವೀಕ್ಷಿಸಬಹುದಾಗಿದೆ.

ಇಂಗ್ಲೀಷ್ ಅಲ್ಲದೆ, ಬೆಂಗಾಳಿ, ಗುಜರಾತಿ, ಗುರುಮುಖಿ, ಹಿಂದಿ, ಕನ್ನಡ, ಮಲೆಯಾಳಂ, ಒರಿಯಾ, ತಮಿಳು, ತೆಲುಗು ಭಾಷೆಯ ತಾಣಗಳನ್ನು ಸುಲಭವಾಗಿ ವೀಕ್ಷಿಸಬಹುದು ಎಂದು ಕಂಪೆನಿ ಹೇಳಿದೆ. ಮುಂಬರುವ ದಿನಗಳಲ್ಲಿ ಮೊಬೈಲ್ ಇಂಟರ್ ನೆಟ್ ಕ್ಷೇತ್ರಕ್ಕೂ ಬಿಟ್ ಸ್ಟ್ರೀಮ್ ಕಾಲಿಡಲಿದೆ ಎಂದು ಕಂಪೆನಿಯ ಸಿಇಒ ಅನ್ನಾ ಮಗ್ಲಿಒಕೊ ಛಾಕ್ನೊನ್ ಹೇಳುತ್ತಾರೆ.

ಬ್ಲಾಕ್ ಬೆರ್ರಿ ಹಾಗೂ ಸಮಾನಾಂತರ ಮೊಬೈಲ್ ಸಾಧನಗಳಲ್ಲಿ ಮಾತ್ರವಲ್ಲದೆ, J2ME ಸೌಲಭ್ಯವಿರುವ Palm ಸಾಧನ, ವಿಂಡೋಸ್ ಆಧಾರಿತ ಎಚ್ ಟಿಸಿ ಟಚ್, ಮೋಟೊ ಕ್ಯೂ, ಮೊಟೊ ಕ್ಯೂ 9ಸಿ ಸರಣಿ ಮೊಬೈಲ್ ಗಳನ್ನು ಬೋಲ್ಟ್ ಬ್ರೌಸರ್ ಬಳಸಬಹುದು. ನಿಮ್ಮ ಜಾವಾ ಆಧಾರಿತವಾದ ಮೊಬೈಲ್ ನಲ್ಲಿ Java MIDP 2 ಹಾಗೂ CLDC 1.0 ಇದ್ದರೆ ಸುಲಭವಾಗಿ ಬೋಲ್ಟ್ ಕಾರ್ಯ ನಿರ್ವಹಿಸುತ್ತದೆ.

ಡೌನ್ ಲೋಡ್ ಹೇಗೆ :
ಪ್ರಮಾಣಿಕೃತ ಹಾಗೂ ಪ್ರಮಾಣ ಪತ್ರವಿಲ್ಲದ ಎರಡು ಆವೃತ್ತಿಯಲ್ಲಿ ಲಭ್ಯವಿದ್ದು, ಇನ್ನೊಂದು ಲೈಟ್ ಆವೃತ್ತಿ(lower end mobiles) ಕೂಡಾ ಗ್ರಾಹಕರಿಗೆ ಸಿಗಲಿದೆ. VeriSign and Thawte ನ ಪ್ರಮಾಣ ಪತ್ರವುಳ್ಳ ಆವೃತ್ತಿ ಸರಿಯಾಗಿ ಕಾರ್ಯ ನಿರ್ವಹಿಸಸಿದ್ದರೆ, ಬೋಲ್ಟ್ ಲೈಟ್ ಆವೃತ್ತಿ ಡೌನ್ ಲೋಡ್ ಮಾಡಿಕೊಳ್ಳಬಹುದು ಬ್ಲಾಕ್ ಬೆರ್ರಿ ಗ್ರಾಹಕರಿಗೆ ಪ್ರತ್ಯೇಕ ಡೌನ್ ಲೋಡ್ ಕೊಂಡಿ ನೀಡಲಾಗಿದೆ.

Wi-Fi, GPRS, 3G, ActiveSync or EDGE ಉಳ್ಳ ಯಾವುದೇ ಮೊಬೈಲ್ ಮೂಲಕ ಬೋಲ್ಟ್ ಬ್ರೌಸರ್ ಬಳಸಿ ಇಂಟರ್ ನೆಟ್ ನಲ್ಲಿ ಸರ್ಫ್ ಮಾಡಬಹುದು. HTML 5, ಫ್ಲಾಷ್, ವಿಡಿಯೋ ಹಾಗೂ ಸಮಾಜಿಕ ಜಾಲ ತಾಣಗಳಲ್ಲಿ ವಿಹರಿಸಲು ಬೋಲ್ಟ್ ಅನುಕೂಲಕರವಾಗಿದ್ದು, ಸುರಕ್ಷಿತವಾಗಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Now, you can browse Indian languages on mobile phones. Bitstream Inc has launched new Bolt mobile browser which supports Indian languages. The Bolt browser offers he widest variety of streaming audio and video and supports Flash and HTML5 video. It also has many advanced features and social network integration.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more