• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗನ್ ರೆಡ್ಡಿ ರಾಜೀನಾಮೆ, ಹೊಸ ಪಕ್ಷ ಸ್ಥಾಪನೆ?

By Mahesh
|

Kadapa MP YS Jagan resigns
ಹೈದರಾಬಾದ್, ನ. 29: ಆಂಧ್ರಪ್ರದೇಶ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಕಾಂಗ್ರೆಸ್ ನ ಬಂಡಾಯ ನಾಯಕ, ದಿವಂಗತ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಪುತ್ರ ವೈಎಸ್ ಜಗನ್ ಮೋಹನ್ ರೆಡ್ಡಿ ತಮ್ಮ ಸಂಸತ್ ಸದಸ್ಯ ಸ್ಥಾನ(ಕಡಪ ಕ್ಷೇತ್ರ)ಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಲೋಕಸಭಾ ಸ್ಪೀಕರ್ ಮೀರಾಕುಮಾರ್ ಅವರಿಗೆ ಇಂದು ರಾಜೀನಾಮೆ ಪತ್ರವನ್ನು ಕಳಿಸಿದ್ದಾರೆ. ಇದರ ಜೊತೆಗೆ ಜಗನ್ ಅವರ ತಾಯಿ ವಿಜಯಮ್ಮ ಕೂಡಾ ಎಂಎಲ್ ಎ(ಪುಲಿವೆಂದುಲಾ ಕ್ಷೇತ್ರ) ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಆಂಧ್ರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಮ್ಮೆ ಅತಂಕ ಉಂಟಾಗಿದೆ.

ರಾಜೀನಾಮೆ ನೀಡಿರುವ ಜಗನ್, ತನ್ನ ತಂದೆ ವೈಎಸ್ ಆರ್ ಹೆಸರಿನಲ್ಲಿ "ವೈಎಸ್ ಆರ್ ಕಾಂಗ್ರೆಸ್ "ಹೊಸ ಪ್ರಾದೇಶಿಕ ಪಕ್ಷವನ್ನು ಘೋಷಿಸಿದ್ದಾರೆ. ಅಲ್ಲದೆ, ಜಗನ್ ಬೆಂಬಲಿಗ ಶಾಸಕರು ರಾಜೀನಾಮೆ ನೀಡಿದಲ್ಲಿ, ಸರಕಾರ ಪತನಗೊಳ್ಳುವ ಸಾಧ್ಯತೆಯಿದೆ. ಇದನ್ನು ತಡೆಯಲು ರಾಜ್ಯದ ಉಸ್ತುವಾರಿ ಹೊತ್ತಿರುವ ವೀರಪ್ಪ ಮೊಯ್ಲಿ, ನೂತನ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಪ್ರಜಾರಾಜ್ಯಂ ಅಧ್ಯಕ್ಷ ಕೆ. ಚಿರಂಜೀವಿ ಬೆಂಬಲ ಕೋರಿರುವ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸರ್ಕಾರ ಪತನ ಸಾಧ್ಯವೇ?: ಆಂಧ್ರಪ್ರದೇಶ ವಿಧಾನಸಭೆಯು 294 ಸದಸ್ಯ ಬಲವನ್ನು ಹೊಂದಿದೆ. ಕಾಂಗ್ರೆಸ್ ಬಳಿ ಸುಮಾರು 156 ಸ್ಥಾನಗಳಿವೆ. ಸರ್ಕಾರದ ಬೆಂಬಲಕ್ಕೆ 147 ಸದಸ್ಯರು ಸಾಕು. ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಹೊಂದಿರುವ ಶಾಸಕರ ಸಂಖ್ಯೆ 18. ಹೀಗಾಗಿ ಜಗನ್ ಹಿಂದೆ 30 ರಿಂದ 35 ಶಾಸಕರು ಹೋದರೂ, ಸರ್ಕಾರ ಉಳಿಸಿಕೊಳ್ಳಬಹುದು ಎಂಬ ವಿಶ್ವಾಸ ಕಾಂಗ್ರೆಸ್ಸಿಗಿದೆ. ಅಲ್ಲದೆ, ಜಗನ್ ಚಿಕ್ಕಪ್ಪ ವಿವೇಕಾನಂದ ರೆಡ್ಡಿ ಅವರ ಸಂಪುಟಕ್ಕೆ ಸೇರಿಸಿಕೊಂಡಿದ್ದಲ್ಲದೆ, ವೈಎಸ್ ಆರ್ ಹಿಂಬಾಲಕರಾಗಿದ್ದ ಹಿರಿಯ ನಾಯಕರಿಗೆ ಸೂಕ್ತ ಸ್ಥಾನ ಕಲ್ಪಿಸಿ, ಜಗನ್ ಗೆ ಹೊಡೆತ ನೀಡುವಲ್ಲಿ ಆಂಧ್ರ ಸಿಎಂ ಕಿರಣ್ ರೆಡ್ಡಿ ನಿರತರಾಗಿದ್ದಾರೆ.

English summary
Creating a major twist in Andhra Pradesh politics, Congress rebel leader and son of former CM YS Rajashekhara Reddy, YS Jaganmohan Reddy has resigned Kadapa MP post. His mother Vijayamma also submitted resignation to her MLA post. Jagan likely to launch new party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X