ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃತ್ತಿಪರತೆ ವೃತ್ತಿಧರ್ಮ ಪೊರೆಯಲು ಮೂರ್ತಿ ಕರೆ

By Prasad
|
Google Oneindia Kannada News

NR Narayana Murthy, Infosys chairman
ಬೆಂಗಳೂರು, ನ. 27 : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಪರತೆಯನ್ನು ಹೆಚ್ಚೆಚ್ಚಾಗಿ ಪ್ರೋತ್ಸಾಹಿಸಬೇಕು ಮತ್ತು ವೃತ್ತಿಧರ್ಮವನ್ನು ಬೆಳೆಸಿಕೊಳ್ಳಬೇಕು ಎಂದು ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಕಂಪನಿಯ ರಾಜಗುರು ಎನ್ಆರ್ ನಾರಾಯಣ ಮೂರ್ತಿ ಅವರು ಕಿವಿಮಾತು ಹೇಳಿದ್ದಾರೆ.

ಅವರು ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (IET) ಸಂಸ್ಥೆ ಶುಕ್ರವಾರದಂದು ಆಯೋಜಿಸಿದ್ದ ದುಂಡು ಮೇಜಿನ ಸಮ್ಮೇಳನದಲ್ಲಿ ಮಾತನಾಡುತ್ತ ಸದ್ಯ ಐಟಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಸ್ಥಿತಿಯನ್ನು ಗಮನಿಸಿದಾಗ ವೃತ್ತಿಪರತೆ ಮತ್ತು ವೃತ್ತಿಧರ್ಮದ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿ ಇರುವುದು ಕಂಡುಬರುತ್ತದೆ ಎಂದರು.

ನಮ್ಮ ದೇಶ ಮತ್ತು ಜಗತ್ತನ್ನು ಅತ್ಯುತ್ತಮ ನೆಲೆಯನ್ನಾಗಿಸುವ ನಿಟ್ಟಿನಲ್ಲಿ ವೃತ್ತಿಪರತೆ ಮತ್ತು ವೃತ್ತಿಧರ್ಮಗಳು ಇಂದು ಹೆಚ್ಚು ಪ್ರಸ್ತುತವಾಗುತ್ತಿವೆ. ಅದರಲ್ಲೂ ಹೊಸದಾಗಿ ಸೇರಿಕೊಂಡಿರುವ ಐಟಿ ತಂತ್ರಜ್ಞರಿಗೆ ವೃತ್ತಿಪರತೆಯ ಕುರಿತು ತರಬೇತಿ ನೀಡಬೇಕು ಮತ್ತು ಉನ್ನತ ಗುರಿ ತಲುಪಲು ಪ್ರೋತ್ಸಾಹಿಸಬೇಕು ಎಂದು ನಾರಾಯಣ ಮೂರ್ತಿ ಹೇಳಿದರು.

ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಸಿಇಓ ಆಗಿರುವ ನೈಜೆಲ್ ಫೈನ್ ಅವರು, ವೃತ್ತಿಗೆ ಅಗತ್ಯವಿರುವಂಥ ವಿದ್ಯಾರ್ಹತೆ ಮತ್ತು ವೃತ್ತಿಪರತೆ ಒಟ್ಟಾಗಿಯೇ ಸಾಗುತ್ತವೆ ಮತ್ತು ಹೊರಜಗತ್ತಿಗೆ ನಮ್ಮ ಸಾಮರ್ಥ್ಯವನ್ನು ತೋರ್ಪಡಿಸಿಕೊಳ್ಳಲು ಅಗತ್ಯವಾಗಿರುತ್ತವೆ ಎಂದರು.

English summary
professionalism and ethics are more relevant in the present competitive Information technology sector, says Infosys chairman NR Narayana Murthy at a round table conference organized by Institute of Engineers and Technology, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X