ಜಾಹೀರಾತಿನ ಮೂಲಕ ನಿಮ್ಮ ಬಣ್ಣ ಬಯಲು: ಸಿಎಂ
ಶಿವಮೊಗ್ಗ,
ನ.27 : ಈ ಹಿಂದಿನ ನಮ್ಮ ಮುಖ್ಯಮಂತ್ರಿಗಳು ನಡೆಸಿದ ಡಿನೋಟಿಫೈ, ಸಂಬಂಧಿಕರಿಗೆ ಹಂಚಿದ ನಿವೇಶನ, ಶಾಸಕರಿಗೆ 'ಜಿ' ಕೋಟಾದಲ್ಲಿ ನೀಡಿದ ನಿವೇಶನ ಮತ್ತು ಅವರ ಮೇಲಿರುವ ಆರೋಪ ಪಟ್ಟಿಯನ್ನು ಜಾಹೀರಾತಿನ ಮೂಲಕ ಪ್ರಕಟಿಸಿ ಪ್ರತಿಪಕ್ಷಗಳ ಬಣ್ಣ ಬಯಲು ಮಾಡುವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ. id="toptextpromo">ನಮ್ಮ
ಮೇಲಿರುವ ಆರೋಪಗಳ ದಾಖಲೆಗಳನ್ನು ಕೂಡಾ ನೀವು ಪ್ರಸ್ತುತ ಪಡಿಸಿ. ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಹೋಗೋಣ. ಜನ ಏನು ತೀರ್ಮಾನ ಕೊಡುತ್ತಾರೆಂದು ನೋಡೋಣ? ಇದು ನಾನು ನಿಮಗೆ ನೀಡುತ್ತಿರುವ ನೇರ ಸವಾಲು. ಮೊದಲ ಕಂತಿನಲ್ಲಿ ಮೈಸೂರಿನಲ್ಲಿ ದೇವೇಗೌಡ ಕುಟುಂಬದ 32 ಜನರಿಗೆ ಅಕ್ರಮವಾಗಿ ನೀಡಿದ ನಿವೇಶನಗಳ ಬಗ್ಗೆ ಜಾಹೀರಾತಿನಲ್ಲಿ ಪ್ರಕಟಿಸುತ್ತೇವೆ. ಇದಕ್ಕೆ ತಗಲುವ ಖರ್ಚನ್ನು ಅರ್ಧ ಪಕ್ಷ ಮತ್ತು ಉಳಿದದನ್ನು ಸ್ವಂತ ಖರ್ಚಿನಲ್ಲಿ ಭರಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎಸ್.ಎಂ.
ಕೃಷ್ಣ ಕಾಲದಲ್ಲಿ 251 ಎಕರೆ, ಧರಂಸಿಂಗ್ ಅವಧಿಯಲ್ಲಿ 133, ಕುಮಾರಸ್ವಾಮಿ ಕಾಲದಲ್ಲಿ 225, ರಾಷ್ಟ್ರಪತಿ ಆಳ್ವಿಕೆಯಲ್ಲಿ 127 ಹಾಗೂ ತಮ್ಮ ಎರಡೂವರೆ ವರ್ಷದ ಕಾಲಾವಧಿಯಲ್ಲಿ 169 ಎಕರೆ ಜಮೀನು ಡಿನೋಟಿಫೈ ಆಗಿದೆ.ಅಲ್ಲದೇ, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಜಿ ಕೋಟಾದಲ್ಲಿ ಕೃಷ್ಣ ಕಾಲದಲ್ಲಿ 334, ಧರಂಸಿಂಗ್ 76, ಕುಮಾರಸ್ವಾಮಿ 350 ಹಾಗೂ ತಮ್ಮ ಕಾಲದಲ್ಲಿ 136 ಜನರಿಗೆ ನಿವೇಶನ ನೀಡಲಾಗಿದೆ ಎಂದು ವಿವರಿಸಿದರು.











Click it and Unblock the Notifications