ಈ ವಿದ್ಯಾರ್ಥಿಗಳ ಸಾಧನೆಗೆ ಬೆನ್ನು ತಟ್ಟೋಣವೆ?

ಎಸ್.ಜೆ. ರೋಹಿತ್ : ಬಳ್ಳಾರಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ಎಸ್.ಜೆ. ರೋಹಿತ್ 2009-10ನೇ ಸಾಲಿನಲ್ಲಿ ನಡೆದ ಬಿಬಿಎಂ ಪದವಿ ಪರೀಕ್ಷೆಯಲ್ಲಿ ದ್ವೀತಿಯ ರ್‍ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಲಿ ಅಧ್ಯಕ್ಷ ಎನ್. ಪ್ರತಾಪರೆಡ್ಡಿ, ಪೋಷಕರು, ಬೋಧಕವರ್ಗ, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.
***
ಪದ್ಮಾವತಿ : ಬಳ್ಳಾರಿಯ ಇಂಡಿಯನ್ ಡಿಎಡ್ ಕಾಲೇಜಿನ ವಿದ್ಯಾರ್ಥಿನಿ ಪದ್ಮಾವತಿ 2009-10ರ ಸಾಲಿನ ವಾರ್ಷಿಕ ಅಂತಿಮ ಪರೀಕ್ಷೆಯಲ್ಲಿ ಶೇ.89ರಷ್ಟು ಅಂಕಗಳನ್ನು ಪಡೆದಿದ್ದಾಳೆ.
***
ಷಾಶವಲಿ, ಕಮಲಾಕ್ಷಿ, ಎಸ್. ಹಸೀನಾ : ಬಳ್ಳಾರಿ ಶಿಕ್ಷಕರ ತರಬೇತಿ ಸಂಸ್ಥೆ ಡಿಇಡಿ ಪರೀಕ್ಷೆಯಲ್ಲಿ 2009-10ರ ಶೈಕ್ಷಣಿಕ ಸಾಲಿನ ವಾರ್ಷಿಕ ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಷಾಶವಲಿ ಶೇ.88, ಕಮಲಾಕ್ಷಿ ಶೇ.87 ಮತ್ತು ಎಸ್. ಹಸೀನಾ ಶೇ.85 ಅಂಕಗಳಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ.











Click it and Unblock the Notifications