ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾರ್ದನ ರೆಡ್ಡಿ ವೀಡಿಯೊ ಟೇಪ್ ಬಿಎಸ್ ವೈ ಕೈವಾಡ?

By Mahesh
|
Google Oneindia Kannada News

Siddaramaiah
ಬೆಂಗಳೂರು, ನ. 22: ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಹಾಗೂ ಕೇಂದ್ರ ಕಾನೂನು ಇಲಾಖೆಯ ಸಲಹೆಗಾರ ಎಂದು ಹೇಳಲಾದ ಅಶೋಕ್ ಶರ್ಮಾ ನಡುವೆ ನಡೆದಿರುವ ರಹಸ್ಯ ಮಾತುಕತೆಯ ವೀಡಿಯೊ ಟೇಪ್ ಮುಖ್ಯಮಂತ್ರಿ ಕಡೆಯವರ ಸೃಷ್ಟಿಯಾಗಿರಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಕಂಡ ಕಂಡ ದೇವರ ಮೊರೆ ಹೊಕ್ಕಿ ಸುಸ್ತಾಗಿರುವ ಸಿಎಂ, ಈಗ ಹೈಟೆಕ್ ತಂತ್ರ ಉಪಯೋಗಿಸಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತ ಪ್ರತಿಕ್ರಿಯಿಸಿದ್ದಾರೆ.

ವೀಡಿಯೊ ಟೇಪ್‌ನಲ್ಲಿರುವ ವ್ಯಕ್ತಿ ಅಶೋಕ್ ಶರ್ಮಾ ಯಾರು ಎಂಬುದು ತಮಗೆ ಗೊತ್ತಿಲ್ಲ. ಆ ವ್ಯಕ್ತಿಯ ಹೆಸರು ತಾನು ಕೇಳಿಲ್ಲ. ಅಲ್ಲದೆ, ಟೇಪ್‌ನಲ್ಲಿ ರಾಜಭವನವನ್ನು ಪ್ರಸ್ತಾಪಿಸಿರುವುದು ಕಂಡರೆ, ರಾಜ್ಯಪಾಲರು ಹಾಗೂ ರಾಜಭವನಕ್ಕೆ ಕೆಟ್ಟ ಹೆಸರು ತರುವ ಯತ್ನ ಇದಾಗಿರಬಹುದು. ಅಲ್ಲದೆ, ಇಂತಹ ಕೃತ್ಯಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ. ಸರ್ಕಾರ ಉರುಳಿಸಲು ಈ ರೀತಿ ತಂತ್ರ ಮಾಡುವುದಿಲ್ಲ ಈ ಸಂಬಂಧ ಸಮಗ್ರ ತನಿಖೆಯಾಗಲಿ ಎಂದು ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.

ಸ್ವಯಂ ಕೃತ ಅಪರಾಧ ಕಾರಣ:
ಮಾಧ್ಯಮಗಳಲ್ಲಿ ಪ್ರಸಾರವಾದಂತೆ ಈ ವಿಡಿಯೋ ದೃಶ್ಯಗಳು ಆಗಸ್ಟ್‌ನಲ್ಲಿ ಚಿತ್ರೀಕೃತವಾಗಿದೆ. ಹಾಗಿದ್ದರೂ ಯಡಿಯೂರಪ್ಪ ಈವರೆಗೆ ರೆಡ್ಡಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣವೇನು? ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳು ಯತ್ನಿಸುತ್ತಿಲ್ಲ. ಸ್ವಯಂ ಕೃತ ಅಪರಾಧವೆ ಯಡಿಯೂರಪ್ಪರ ಇಂದಿನ ಸ್ಥಿತಿಗೆ ಕಾರಣ. ಅವರ ಪಕ್ಷದ ಆಂತರಿಕ ಕಿತ್ತಾಟವೇ ಅವರನ್ನು ಈ ಸ್ಥಿತಿಗೆ ತಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X