ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮಗಳ ಏಕಪಕ್ಷೀಯ ವರದಿ ವಿರುದ್ಧ ಸಿಎಂ ಕಿಡಿ

By Mahesh
|
Google Oneindia Kannada News

CM BSY distributes Suryanagar sites
ಬೆಂಗಳೂರು, ನ. 22: 'ನನ್ನ ನಂತರದ ಉತ್ತರಾಧಿಕಾರಿ ನಾನೇ' ಎಂದು ಎದೆಯುಬ್ಬಿಸಿ ಮಾಧ್ಯಮ ಮಿತ್ರರ ಮುಂದೆ ಹೇಳುತ್ತಾ ಬಂದಿರುವ ಸಿಎಂ, ಟಿವಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ಏಕಪಕ್ಷೀಯ ಹಾಗೂ ಪೂರ್ವಾಗ್ರಹ ಪೀಡಿತ ವರದಿಗಳ ಮೂಲಕ ರಾಜ್ಯದ ಜನತೆ ಮುಂದೆ ನನ್ನನು ವಿಲನ್ ಎಂದು ಬಿಂಬಿಸಲಾಗುತ್ತಿದೆ. ಸರ್ಕಾರದ ಪ್ರಗತಿಯ ಬಗ್ಗೆ ಒಂದಿಷ್ಟು ಸರಿಯಾದ ಮಾಹಿತಿ ಕಲೆ ಹಾಕಲಿ ವರದಿ ಮಾಡಲಿ ಎಂದು ಗುಡುಗಿದ್ದಾರೆ.

ರಾಜ್ಯ ಗೃಹ ಮಂಡಳಿ(KHB) ಸೂರ್ಯನಗರದ ಎರಡನೇ ಹಂತದ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ವಿರೋಧಿಗಳ ವಿರುದ್ಧ ಕಿಡಿ: 'ನಾನು ಹಗಲೂ ರಾತ್ರಿ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿದ್ದೇನೆ. ಆದರೆ ರಾಜ್ಯಕ್ಕೆ ಒಳ್ಳೆಯದಾದರೆ ಕಣ್ಣೀರು ಹಾಕುವ ಕೆಲ ರಾಜಕಾರಣಿಗಳು ಇದ್ದಾರೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ'. ''ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಒಮ್ಮೆ ಕೂಡ ನೆಮ್ಮದಿಯಿಂದ ಕೆಲಸ ಮಾಡಲು ಪ್ರತಿಪಕ್ಷಗಳು ಬಿಟ್ಟಿಲ್ಲ, ಹಿಂದೆ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಎಸ್.ಎಂ.ಕೃಷ್ಣ ಅವರಿಗೆ ಕಿರುಕುಳ ನೀಡಿದವರೇ ನನಗೂ ಕಿರುಕುಳ ನೀಡುತ್ತಿದ್ದಾರೆ" ಎಂದು ಪರೋಕ್ಷವಾಗಿ ಎಚ್.ಡಿ. ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ನಿರಾಶ್ರಿತರಿಗೆ ಮನೆ: ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಹಾನಿಗೀಡಾಗಿದ್ದ 300 ಊರುಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ, 30,000 ಮನೆಗಳನ್ನು ನಿರ್ಮಿಸಲಾಗಿದೆ, ಇನ್ನು 35 ಸಾವಿರ ಮನೆಗಳನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದರು.

ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, "ರಾಜ್ಯವನ್ನು ಗುಡಿಸಲು ಮುಕ್ತ ನಾಡನ್ನಾಗಿಸಬೇಕು, ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ಮನೆ ನಿರ್ಮಿಸಬೇಕು, ಹೊಸ ಕೊಳೆಗೇರಿಗಳು ಹುಟ್ಟಿಕೊಳ್ಳಲು ಬಿಡಬಾರದು. ಕಡಿಮೆ ಬೆಲೆಗೆ ನಿವೇಶನಗಳನ್ನು ಒದಗಿಸಬೇಕು ಎಂಬುದು ಸಿಎಂ ಅವರ ಮಹದಾಸ" ಎಂದರು.

ರಾಜ್ಯ ಗೃಹ ಮಂಡಳಿಯ ಅಧ್ಯಕ್ಷ ಜಿ.ಟಿ. ದೇವೇಗೌಡ ಮಾತನಾಡಿ, "ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಸೂರ್ಯ ನಗರ ಎರಡನೇ ಹಂತದಲ್ಲಿ 1330 ಸೈಟುಗಳನ್ನು ಲಾಟರಿ ಎತ್ತುವ ಮೂಲಕ ಹಂಚಲಾಗಿದೆ. ಒಟ್ಟು 8,733 ವಸತಿ ನಿವೇಶನಗಳು ಹಾಗೂ 272 ಮನೆಗಳನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು" ಎಂದರು.

English summary
Scam hit Yedddyurappa took time to initiate the process of distributing the house sites and flats constructed in the Karnataka Housing Board’s Suryanagar Layout second phase through lottery in Bangalore on Sunday(Nov.21).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X