ಏರ್ ಟೆಲ್ ಗೆ ಹೊಸ ರಾಗ, ಹೊಸ ಲಾಂಛನ
ನವದೆಹಲಿ,
ನ.19: ವಿಶ್ವದ 5ನೇ ಅತಿ ದೊಡ್ಡ ದೂರಸಂಪರ್ಕ ಸಂಸ್ಥೆ ಭಾರತದ ಅಗ್ರಗಣ್ಯ ಕಂಪೆನಿ ಭಾರ್ತಿ ಏರ್‌ಟೆಲ್ ಗುರುವಾರ ತನ್ನ ಹೊಸ 'ಜಾಗತಿಕ ಲಾಂಛನ" ಬಿಡುಗಡೆ ಮಾಡಿದೆ. ಮರು ವಿನ್ಯಾಸಗೊಂಡಿರುವ ಲಾಂಛನವು ಭಾರತ ಮತ್ತು ವಿದೇಶಗಳಲ್ಲಿಯೂ ಬಳಕೆಗೆ ಬರಲಿದೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರು ಸಂಯೋಜಿಸಿರುವ ಹೊಸ 'ಏರ್‌ಟೆಲ್ ರಾಗ"ವನ್ನೂ ಕೂಡಾ ಅನಾವರಣಗೊಳಿಸಲಾಗಿದೆ. id="toptextpromo">3ಜಿ
ಸೇವೆ ಆರಂಭ: 3ಜಿ ಸೌಲಭ್ಯದ ಬೀಟಾ ಆವೃತ್ತಿ ಸದ್ಯಕ್ಕೆ ಚಾಲನೆಯಲ್ಲಿದ್ದು, ಡಿಸೆಂಬರ್ ತಿಂಗಳ ಅಂತ್ಯಕ್ಕೆ ಭಾರ್ತಿ ಏರ್ ಟೆಲ್ ನ ವಾಣಿಜ್ಯ ಉದ್ದೇಶಿತ 3ಜಿ ಸೇವೆ ಆರಂಭವಾಗಲಿದೆ ಎಂದು ಸಂಸ್ಥೆಯ ಎಂಡಿ ಸುನೀಲ್ ಮಿತ್ತಲ್ ಹೇಳಿದರು. 3ಜಿ ಸೌಲಭ್ಯ ಬಳಸಿ ವಿಡಿಯೋ ಕರೆ ಮಾಡಿ, ಸೌಲಭ್ಯದ ಪ್ರಾತ್ಯಕ್ಷಿಕೆ ಕಂಡು ಸಂತೋಷಗೊಂಡರು. id='are-slot-1' class='oiad oi-axt oiadv'> id='top-searched-articles'>ಭಾರ್ತಿ
ಏರ್ ಟೆಲ್ ಸಂಸ್ಥೆ ಒಟ್ಟಾರೆ ಗ್ರಾಹಕರ ಸಂಖ್ಯೆ 20 ಕೋಟಿ ದಾಟಿದ್ದು, ದೇಶದಲ್ಲಿನ ಚಂದಾದಾರರ ಸಂಖ್ಯೆ 15 ಕೋಟಿ ದಾಟಿದೆ. ಆಫ್ರಿಕಾದಲ್ಲಿ 4 ಕೋಟಿ ಮತ್ತು ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ಉಳಿದ ಗ್ರಾಹಕರು ಇದ್ದಾರೆ.











Click it and Unblock the Notifications