ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೋತ್ರಿ ದೇಗುಲದಿ ದಲಿತರಿಗೆ ಓನಾಮ

By Mahesh
|
Google Oneindia Kannada News

Gangotri Temple
ಗಂಗೋತ್ರಿ, ನ.15: ಹಿಂದೂಗಳ ಪವಿತ್ರ ಯಾತ್ರಾಸ್ಥಳ ಗಂಗೋತ್ರಿಯ ದೇಗುಲದಲ್ಲಿ ಯುವ ಪ್ರತಿಭಾವಂತ ದಲಿತರಿಗೆ ತರಬೇತಿ ನೀಡಿ ಅರ್ಚಕ ವೃತ್ತಿ ಸೇರಿಸಿಕೊಳ್ಳಲು ದೇಗುಲದ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ದೇಗುಲದ ಆವರಣದಲ್ಲೇ ದಲಿತರನ್ನು ಪುರೋಹಿತರನ್ನಾಗಿಸುವ ಕಾಯಕ ಆರಂಭವಾಗಲಿದೆ ಎಂದು ಹಿರಿಯ ಅರ್ಚಕ ಹಾಗೂ ವ್ಯವಸ್ಥಾಪಕ ಅಧ್ಯಕ್ಷ ಪಂಡಿತ್ ಸಂಜೀವ್ ಸೆಮ್ವಾಲ್ ಹೇಳಿದ್ದಾರೆ.

ಈ ಐತಿಹಾಸಿಕ ಬದಲಾವಣೆಯನ್ನು ಸ್ವಾಗತಿಸಿರುವ ರಾಜ್ಯ ಸಭೆ ಸದಸ್ಯ ತರುಣ್ ವಿಜಯ್, ವಾರಾಂತ್ಯದಲ್ಲಿ ಈ ಕುರಿತು ದೇಗುಲದಲ್ಲಿ ಸಭೆ ನಡೆಸಲಾಗುವುದು ಎಂದಿದ್ದಾರೆ. ಮಂದಿರದ ಆಡಳಿತ ಮಂಡಳಿ ಹಾಗೂ ಪಂಡಾಗಳು ಮುಕ್ತ ಮನಸ್ಸಿನಿಂದ ಈ ಶುಭ ಕಾರ್ಯಕ್ಕೆ ಅಣಿಯಾಗಿದ್ದಾರೆ.

ಹರಿಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಕೋಮು ಗಲಭೆಯಿಂದ ಹಿಂದೂ ಸಮಾಜ ಒಡೆದು ಹೋಗುತ್ತಿರುವ ಸಂದರ್ಭದಲ್ಲಿ ಈ ರೀತಿ ಸುಧಾರಣೆಗಳು ಆಗುತ್ತಿರುವುದು ಒಳ್ಳೆಯ ಬೆಳವಣಿಗೆಗೆ ಎಂದು ವಿಜಯ್ ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡು ಎಲ್ಲರಿಗಿಂತ ಮುಂದೆ:
ದಲಿತರನ್ನು ದೇಗುಲದ ಅರ್ಚಕರಾಗಿ ನೇಮಿಸುವ ಪ್ರಕ್ರಿಯೆಗೆ 2006ರಲ್ಲಿ ಅಲ್ಲಿನ ಸರ್ಕಾರ ಆದೇಶ ನೀಡಿತ್ತು. ತಮಿಳುನಾಡು ಸರ್ಕಾರದ ಅಧೀನದಲ್ಲಿರುವ ಸುಮಾರು 36,000 ದೇಗುಲಗಳಲ್ಲಿ ಎಲ್ಲಿ ಬೇಕಾದರೂ ಹಿಂದುಳಿದ ವರ್ಗಕ್ಕೆ ಸೇರಿದವರು ಅರ್ಚಕ ತರಬೇತಿ ಹಾಗೂ ವೃತ್ತಿ ಆರಂಭಿಸಬಹುದಿತ್ತು. ಆದರೆ, ವಿದ್ಯೆ ಕಲಿತ ದಲಿತ ಯುವಕರಿಗೆ ದೊಡ್ಡ ದೇಗುಲಗಳ ಬಾಗಿಲುಗಳು ತೆರೆಯಲೇ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X