ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ನಲ್ಲಿ ಆರು ಭಾರತೀಯರ ಬಂಧನ

By Mrutyunjaya Kalmat
|
Google Oneindia Kannada News

Crimebeat
ಲಂಡನ್, ನ. 15 : ಸೌತ್‌ಹಾಲ್‌ ನ ಹೇಯೆಸ್ ರಸ್ತೆಯಲ್ಲಿರುವ ಸಗಟು ವ್ಯಾಪಾರ ಮಳಿಗೆಯೊಂದಕ್ಕೆ ದಾಳಿ ನಡೆಸಿದ ಬ್ರಿಟನ್ ಗಡಿ ಸಂಸ್ಥೆಯ ಅಧಿಕಾರಿಗಳ ತಂಡ ವಲಸೆ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ಆರು ಮಂದಿ ಭಾರತೀಯರನ್ನು ಭಾನುವಾರ ಬಂಧಿಸಿದ್ದಾರೆ.

24ರಿಂದ 33ರ ವಯೋಮಾನದ ನಡುವಿನ ಐವರು ಭಾರತೀಯರನ್ನು ಇಲ್ಲಿನ ಜೇಸ್ಟಾರ್ ನಲ್ಲಿ UK Border Agency ಅಧಿಕಾರಿಗಳು ಬಂಧಿಸಿದ್ದಾರೆ. ಅವರಲ್ಲಿ ಇಬ್ಬರು ಬ್ರಿಟನ್‌ ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದು, ಇತರ ಮೂವರು ತಮ್ಮ ವೀಸಾ ಅವಧಿ ಅಂತ್ಯಗೊಂಡ ಬಳಿಕವೂ ರಾಷ್ಟ್ರದಲ್ಲಿ ನೆಲೆಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಆಶ್ರಯವನ್ನರಸಿ ವಿಫಲನಾಗಿದ್ದ ಇನ್ನೊಬ್ಬ ಭಾರತೀಯನನ್ನು ಇಲ್ಲಿನ ಎ1 ವೆಜ್ ಲಿಮಿಟೆಡ್‌ ನಲ್ಲಿ ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ. ಸದ್ಯ ಬಂಧನಕ್ಕೊಳಗಾಗಿರುವವರನ್ನು ನೌಕರಿಗೆ ನೇಮಿಸಿಕೊಳ್ಳುವ ವೇಳೆ ಅವರ ಉದ್ಯೋಗದಾತರು ಸರಿಯಾದ ತಪಾಸಣೆ ನಡೆಸಿರುವುದನ್ನು ಸಾಬೀತು ಪಡಿಸದಿದ್ದಲ್ಲಿ, ಅಂತಹವರ ಮೇಲೆ ಸುಮಾರು 10 ಸಾವಿರ ಪೌಂಡು ಮೊತ್ತದ ದಂಡ ಪಾವತಿಸಬೇಕಾಗುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

English summary
Six Indians have been arrested in the UK on charges of violating immigration rules and face deportation. They were arrested after UK Border Agency (UKBA) officers numbering about 20, acting on a tip-off, raided two wholesalers at the centre in Hayes Road in Southall in London
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X