ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ ನಿಂದ ಹೊಸ ಆಂಡ್ರಾಯ್ಡ್ 3ಜಿ ಸ್ಮಾರ್ಟ್ ಫೋನ್

By Mahesh
|
Google Oneindia Kannada News

Dell XCD mobiles
ನವದೆಹಲಿ, ನ.11: ಅಮೆರಿಕ ಮೂಲದ ಕಂಪ್ಯೂಟರ್ ಉತ್ಪಾದನಾ ಸಂಸ್ಥೆ ಡೆಲ್, ಭಾರತದ ಮೊಬೈಲ್ ಹ್ಯಾಂಡ್ ಸೆಟ್ ಮಾರುಕಟ್ಟೆಗೆ ಭರ್ಜರಿಯಾಗಿ ಪ್ರವೇಶ ಪಡೆದಿದೆ. XCD35 ಹಾಗೂ XCD28 ಎಂಬ ಎರಡು ಆಂಡ್ರಾಯ್ಡ್ ಆಧಾರಿತ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಪರಿಚಯಿಸಿದೆ.

ಗೂಗಲ್ ಆಂಡ್ರಾಯ್ಡ್ 2.1 ಆವೃತ್ತಿ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದರೂ, ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ. ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ನೋಕಿಯಾ, ಸ್ಯಾಮ್ ಸಂಗ್ ಹಾಗೂ ಸೋನಿ ಸ್ಮಾರ್ಟ್ ಫೋನ್ ಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಡೆಲ್ ಸಂಸ್ಥೆ ಹೇಳಿದೆ.

Dell XCD35 ಮೊಬೈಲ್ ನಲ್ಲಿ 3.5 ಇಂಚಿನ OLED ಟಚ್ ಸ್ಕ್ರೀನ್, 3 ಮೆಗಾ ಪಿಕ್ಸಲ್ ಕೆಮೆರಾ ಇದೆ. ಆಂಡ್ರ್ಯಾಡ್ 2.1 ಆವೃತ್ತಿ ಆಪರೇಟಿಂಗ್ ಸಿಸ್ಟಮ್ ಗೆ 600Mhz ಪ್ರೊಸೆಸರ್ ಸಾಥ್ ಇದೆ. ಉಳಿದಂತೆ 3ಜಿ, ಬ್ಲೂಟೂಥ್, ವೈಫೈ ಮುಂತಾದ ಸೌಲಭ್ಯಗಳಿವೆ.

150MB ಇಂಟರ್ನಲ್ ಮೆಮೋರಿ ಇದ್ದು ಮೈಕ್ರೋSD ಕಾರ್ಡ್ ಮೂಲಕ 32 ಜಿಬಿ ತನಕ ವಿಸ್ತರಿಸಬಹುದಾಗಿದೆ. ಎಫ್ ಎಂ ರೇಡಿಯೋ, ಮ್ಯೂಸಿಕ್ ಪ್ಲೇಯರ್ ಇದ್ದು ಎಲ್ಲ ಬಗೆಯ ಸಂಗೀತ ಕೇಳಬಹುದಾಗಿದೆ. Dell XCD35 ನ ಬೆಲೆ 16,990 ರು ಗಳಾಗಿದ್ದು, ಡಿಸೆಂಬರ್ ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಇನ್ನೊಂದು ಸ್ಮಾರ್ಟ್ ಫೋನ್ XCD28 ನಲ್ಲಿ 2.8 ಟಚ್ ಸ್ಕ್ರೀನ್, 3.15 ಮೆಗಾ ಪಿಕ್ಸಲ್ ಕೆಮೆರಾ, ಆಂಡ್ರಾಯ್ಡ್ 2.1 ಆವೃತ್ತಿ ಆಪರೇಟಿಂಗ್ ಸಿಸ್ಟಮ್ ಹಾಗೂ 600Mhz ಪ್ರೊಸೆಸರ್, 256 MB RAM ಹಾಗೂ 256MB ROM ಸಾಮರ್ಥ್ಯ ಹೊಂದಿದೆ.

ಇದರಲ್ಲೂ 3ಜಿ, ಬ್ಲೂಟೂಥ್, ವೈಫೈ ಸೇರಿದಂತೆ ಸ್ಮಾರ್ಟ್ ಫೋನ್ ನಲ್ಲಿರುವ ಎಲ್ಲಾ ಸೌಲಭ್ಯಗಳಿವೆ. ವಿಶೇಷವಾಗಿ 80 ಸಾವಿರಕ್ಕೂ ಅಧಿಕ ಆಂಡ್ರಾಯ್ಡ್ ಅಪ್ಲಿಕೇಷನ್ ಗಳು ಉಚಿತವಾಗಿ ಬಳಸಬಹುದಾಗಿದೆ. ಮಾರುಕಟ್ಟೆಯಲ್ಲಿ ತ್ವರಿತವಾಗಿ ಸಿಗಲಿರುವ ಈ ಮೊಬೈಲ್ ನ ಬೆಲೆ 10,990 ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

English summary
Summary in english : US based computer manufacturer, Dell has entered to Indian handset market by launching two Android mobiles called XCD35 and XCD28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X