ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ, ಬೆಳ್ಳಿ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ

By Mahesh
|
Google Oneindia Kannada News

Gold & silver prices continue to gallop
ಮುಂಬೈ, ನ.10: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಉತ್ಸಾಹ ಮತ್ತು ಊಹಾತ್ಮಕ ಖರೀದಿ ಬೆಂಬಲದ ಫಲವಾಗಿ ತಲಾ 10 ಗ್ರಾಂಗಳ ಚಿನ್ನದ ಬೆಲೆ 20 ಸಾವಿರದ ಗಡಿ ದಾಟಿದ್ದರೆ, ಬೆಳ್ಳಿ ಬೆಲೆ ಒಂದೇ ದಿನದಲ್ಲಿ ತಲಾ ಕೆಜಿಗೆ 3,240ರಷ್ಟು ಏರಿಕೆ ಕಂಡಿದೆ.

ಸಂಗ್ರಹಕಾರರು ಮತ್ತು ವರ್ತಕರ ಖರೀದಿ ಬೆಂಬಲದಿಂದ ಬೆಳ್ಳಿ ಬೆಲೆಯು ತಲಾ ಕೆಜಿಗೆ ರೂ. 39,200 ರಿಂದ ರೂ. 42,000ರಷ್ಟಕ್ಕೆ ಏರಿಕೆಯಾಗಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಕಾರಣಕ್ಕೆ ಸಾಗರೋತ್ತರ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಐರೋಪ್ಯ ಒಕ್ಕೂಟದ ಕೆಲ ದೇಶಗಳ ಸಾಲದ ಬಿಕ್ಕಟ್ಟು ತೀವ್ರಗೊಂಡಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ನ್ಯೂಯಾರ್ಕ್‌ನ ಮಾರುಕಟ್ಟೆಯಲ್ಲಿ ತಲಾ ಒಂದು ಔನ್ಸ್‌ನ ಚಿನ್ನದ ಬೆಲೆ 1409 ಡಾಲರ್‌ಗಳಿಂದ 1,420.30 ಡಾಲರ್‌ಗಳಿಗೆ ಏರಿಕೆಯಾಗಿದೆ.

ಈ ಜಾಗತಿಕ ವಿದ್ಯಮಾನವು ಸ್ಥಳೀಯ ಮಾರುಕಟ್ಟೆಯಲ್ಲಿಯೂ ಪ್ರತಿಫಲನಗೊಂಡಿದ್ದು, ಊಹಾತ್ಮಕ ಖರೀದಿಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ದೀಪಾವಳಿ ಹಬ್ಬ ಹಾಗೂ ಮದುವೆ ಋತುವಿನಲ್ಲಿ ಇದು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು 'ದ ಬಾಂಬೆ ಬುಲ್ಲಿಯನ್ ಅಸೋಸಿಯೇಶನ್ಸ್' (BBA)ಅಧ್ಯಕ್ಷ ಸುರೇಶ್ ಹುಂಡಿಯಾ ಅಭಿಪ್ರಾಯಪಟ್ಟಿದ್ದಾರೆ.

ಸ್ಟ್ಯಾಂಡರ್ಡ್ ಚಿನ್ನದ (ಶೇ 99.5ರಷ್ಟು ಶುದ್ಧತೆ) ಬೆಲೆಯು, ಶುಕ್ರವಾರದ ದಿನದ ಅಂತ್ಯಕ್ಕೆ ರೂ. 19,920 ಬೆಲೆಗೆ ಹೋಲಿಸಿದರೆ ತಲಾ 10 ಗ್ರಾಂಗಳಿಗೆ ರೂ. 535ರಷ್ಟು ಹೆಚ್ಚಳಗೊಂಡು ರೂ. 20,455ಕ್ಕೆ ತಲುಪಿದೆ. ಅದೇ ರೀತಿ, ಅಪರಂಜಿ ಚಿನ್ನವು (ಶೇ 99.9ರಷ್ಟು ಶುದ್ಧತೆ) ಕೂಡ ರೂ. 20,015 ರಿಂದ ರೂ 20,550ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X