ತಾರಕಕ್ಕೇರಿದ ಗೂಗಲ್ - ಫೇಸ್ ಬುಕ್ ಕದನ

ಇದಕ್ಕಾಗಿ ಗೂಗಲ್ ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದು, ಗೂಗಲ್ ಸಂಪರ್ಕಗಳನ್ನು ನೇರವಾಗಿ ಫೇಸ್ ಬುಕ್ಕಿಗೆ ವರ್ಗಾಯಿಸಿಕೊಳ್ಳುವುದು ಅಸಾಧ್ಯ. ಫೇಸ್ ಬುಕ್ ಕೂಡ ತನ್ನ ಸಂಪರ್ಕಗಳನ್ನು ಗೂಗಲ್ ಗೆ ವರ್ಗಾಯಿಸುವುದನ್ನು ನಿಷೇಧಿಸಿದೆ.
ಅಮೆರಿಕದಲ್ಲಂತೂ ಎರಡೂ ಇಂಟರ್ನೆಟ್ ಸಂಸ್ಥೆಗಳ ನಡುವಿನ ತಿಕ್ಕಾಟ ಮುಗಿಲು ಮುಟ್ಟಿದೆ. ಗೂಗಲ್ ಅನ್ನು ಹಿಂದಿಕ್ಕಿ, ಅತಿ ಹೆಚ್ಚು ಸಂದರ್ಶಿಸುವ ಮತ್ತು ಅತಿ ಹೆಚ್ಚು ಕಾಲ ಕಳೆಯುವ ವೆಬ್ ಸೈಟ್ ಎಂಬ ಹೆಗ್ಗಳಿಗೆ ಫೇಸ್ ಬುಕ್ ಪಾತ್ರವಾಗಿದೆ. ಜೊತೆಗೆ ಜಾಹೀರಾತುಗಳನ್ನು ಕೂಡ ಕಳೆದುಕೊಳ್ಳುವ ಆತಂಕ ಗೂಗಲ್ ಗೆ ಎದುರಾಗಿದೆ. ಜಾಹೀರಾತುದಾರರು ಗೂಗಲ್ ಬದಲಿಗೆ ಫೇಸ್ ಬುಕ್ಕನ್ನೇ ಹೆಚ್ಚಿಗೆ ನೆಚ್ಚಿಕೊಳ್ಳುತ್ತಿರುವುದು ಗೂಗಲ್ ಗೆ ನುಂಗಲಾಗದ ತುತ್ತಾಗಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7












Click it and Unblock the Notifications