ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

29 ಮಕ್ಕಳಿಗೆ ಕತ್ತಲು ತಂದ ಬೆಳಕಿನ ಹಬ್ಬ

By Prasad
|
Google Oneindia Kannada News

Be careful while bursting crackers
ಬೆಂಗಳೂರು, ಅ. 6 : ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ಬೆಂಗಳೂರಿನ 29 ಮಕ್ಕಳಿಗೆ ಕತ್ತಲನ್ನು ತಂದಿದೆ. ಪಟಾಕಿ ಹಾರಿಸುವ ಭರದಲ್ಲಿ ಎಚ್ಚರಿಕೆ ಕಾಯ್ದುಕೊಳ್ಳದೆ ಅಮೂಲ್ಯವಾದ ದೃಷ್ಟಿಯನ್ನು ಕಳೆದುಕೊಳ್ಳುವ ಸ್ಥಿತಿ ತಂದುಕೊಂಡಿದ್ದಾರೆ.

ನರಕ ಚತುರ್ದಶಿಯ ದಿನ ನವೆಂಬರ್ 5ರಂದು ಅಪಾಯಕಾರಿ ಪಟಾಕಿಗಳನ್ನು ಸಿಡಿಸಲು ಹೋಗಿ ಕಣ್ಣಿಗೆ ಗಾಯ ಮಾಡಿಕೊಂಡಿರುವ ಮಕ್ಕಳು ಬೆಂಗಳೂರಿನ ಮಿಂಟೋ ಆಸ್ಪತ್ರೆ ಮತ್ತು ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರಲ್ಲಿ ಮೂವರು ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಅಪಾಯ ತಂದುಕೊಂಡಿದ್ದಾರೆ.

ಮಿಂಟೋ ಆಸ್ಪತ್ರೆಯಲ್ಲಿ 11 ಮಕ್ಕಳು ಮತ್ತು ನಾರಾಯಣ ನೇತ್ರಾಲಯದಲ್ಲಿ 18 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರಿಗೆ ಶಸ್ತ್ರಕ್ರಿಯೆ ಮಾಡಲಾಗಿದೆ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕ ಶ್ರೀಪ್ರಕಾಶ್ ಮಾಧ್ಯಮಗಳಿಗೆ ತಿಳಿದಿದ್ದಾರೆ.

ಶ್ರೀಪ್ರಕಾಶ್ ನೀಡಿರುವ ಕೆಲ ಸೂಚನೆಗಳು ಹೀಗಿವೆ

* ಪಟಾಕಿ ಕಣ್ಣಿಗೆ ಸಿಡಿದಾಗ ಕಣ್ಣು ತೊಳೆಯಬೇಡಿ. ಕಣ್ಣು ತೊಳೆದರೆ ಹೆಚ್ಚಿನ ಅಪಾಯ.
* ಕಣ್ಣಿಗೆ ಬಟ್ಟೆಯನ್ನು ಮುಚ್ಚಿ ಕೂಡಲೆ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ.
* ಸಾಧ್ಯವಿದ್ದರೆ ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ಪಟಾಕಿ ಸಿಡಿಸಿ.
* ಅಪಾಯಕಾರಿ ಬಾಣ ಬಿಡುವಾಗ ಹಿರಿಯರ ಮಾರ್ಗದರ್ಶನ ಅಗತ್ಯ.
* ಪಟಾಕಿ ಸಿಡಿಸುವವರ ಜೊತೆಗೆ ಸುತ್ತಲು ಇರುವವರಿಗೂ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಪಟಾಕಿ ಸಿಡಿಸುವವರಿಂದ ದೂರವಿರಿ.
* ಬಾಂಬ್, ರಾಕೆಟ್, ಫ್ಲವರ್ ಪಾಟ್ ಮುಂತಾದ ಅಪಾಯಕಾರಿ ಪಟಾಕಿಗಳನ್ನು ಮಕ್ಕಳಿಗೆ ನೀಡಲೇಬೇಡಿ.
* ಪಟಾಕಿ ಸಿಡಿಸಿ ಅಪಾಯ ತಂದುಕೊಳ್ಳುವುದಕ್ಕಿಂದ ನೋಡಿ ಆನಂದಿಸುವುದೇ ಲೇಸು.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X