ರವಿ ಪೂಜಾರಿಯ ಏಳು ಸಹಚರರ ಬಂಧನ

ಇದರಲ್ಲಿ ಮುಖ್ಯವಾಗಿ ಮಂತ್ರಿ ಡೆವಲಪರ‍್ಸ್ ಕಚೇರಿ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ, ಪುಂಜಿಪೆಟ್ಟು ಪೋಸ್ಟ್, ದೊಡ್ಡನಗುಡ್ಡೆ ನಿವಾಸಿ ಸಿರಾಜ್ (32), ಧರ್ಮರಾಜ ಅಲಿಯಾಸ್ ಧರ್ಮೇಂದ್ರ (34), ರಂಜಿತ್ ಜೆ. ಕುಂದರ್ ಅಲಿಯಾಸ್ ರಂಜಿತ್ (27) ಹಾಗೂ ಬೆಂಗಳೂರಿನ ಗೌರವನಗರದ ಶಿವಕುಮಾರ್ ಅಲಿಯಾಸ್ ಗುಂಡ (28) ಬಂಧಿತರು.
ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ, ಎಸ್.ಎನ್. ನಗರದ ಲಕ್ಷ್ಮಣ (34), ಸೊರಬ ರಸ್ತೆ, ಗೋಪಾಲಗೌಡನಗರದ ಮೋಹನ್‌ರಾವ್ (35) ಹಾಗೂ ಲಿಂಗರಾಜಪುರ ತಮ್ಮಣ್ಣ ಗಾರ್ಡನ್‌ನ ನಿಜಾಮುದ್ದೀನ್ ಅಲಿಯಾಸ್ ನಿಜಾಮ (26) ಬಂಧಿತ ಆರೋಪಿಗಳು.
ಖ್ಯಾತ ಉದ್ಯಮಿಗಳು ಹಾಗೂ ಲ್ಯಾಂಡ್ ಡೆವಲಪರ್ಸ್ ಗಳಿಗೆ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡಲು ರವಿಪೂಜಾರಿ ತನ್ನ ಸಹಚರರನ್ನು ಬಳಸಿಕೊಳ್ಳುತ್ತಿದ್ದು, ಅದರಂತೆ ಆರೋಪಿ ಸಿರಾಜ್ ಮತ್ತಿತರರು ಉದ್ಯಮಿಗಳ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ರವಿಪೂಜಾರಿಗೆ ಕಳುಹಿಸುತ್ತಿದ್ದರು. ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಂತ್ರಿ ಡೆವಲಪರ್ಸ್ ಕಚೇರಿಗೆ ಸೆ.25 ರಂದು ರಾತ್ರಿ ತನ್ನ ಇಬ್ಬರು ಸಹಚರರನ್ನು ಹಫ್ತಾ ವಸೂಲಿಗೆ ಕಳುಹಿಸಿದ್ದ.
ಬೈಕ್‌ನಲ್ಲಿ ಬಂದ ಇಬ್ಬರು ಕಚೇರಿಗೆ ಗುಂಡು ಹಾರಿಸಿ ರವಿಪೂಜಾರಿಗೆ ಹಣ ನೀಡಬೇಕು ಎಂದು ಫೋನ್ ನಂಬರ್‌ಗಳನ್ನು ಕೃತ್ಯದ ಸ್ಥಳದಲ್ಲಿ ಎಸೆದು ಹೋಗಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಮರುದಿನ ಬೆಳಗಿನಜಾವ ಚಂದ್ರು ಎಂಬ ಸಹಚರನನ್ನು ಎನ್ ಕೌಂಟರ್ ಮಾಡಿದರು. ಆದರೆ, ಮತ್ತೊಬ್ಬ ತಪ್ಪಿಸಿಕೊಂಡ. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಜಂಟಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ನೇತೃತ್ವದಲ್ಲಿ ತನಿಖಾ ತಂಡ ಮಾಹಿತಿ ಸಂಗ್ರಹಿಸಿ ಮತ್ತಷ್ಟು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications