ಹೊಸಬೆಳಕು ಸಿನ್ಮಾ ನಾಟಕ ಆಗಿದೆ ನೋಡಿ
ಬೆಂಗಳೂರು,
ಅ.30:ಎಂಭತ್ತರ ದಶಕದಲ್ಲಿ ಯಶಸ್ಸು ಕಂಡ ಅಣ್ಣಾವ್ರ ಚಿತ್ರ 'ಹೊಸಬೆಳಕು' ಈಗ ನಾಟಕ ರೂಪದಲ್ಲಿ ವೇದಿಕೆ ಏರಿದೆ. ಸುಂದರ ಹಾಡುಗಳನ್ನು ಒಳಗೊಂಡಿದ್ದ ಚಿತ್ರದಲ್ಲಿ ರಾಜ್ ಕುಮಾರ್ ಗೆ ಜೋಡಿಯಾಗಿ ನಟಿ ಸರಿತಾ ಅಭಿನಯಿಸಿದ್ದರು. ಲೇಖಕಿ ವಾಣಿ ಅವರ ಕಾದಂಬರಿ ಆಧಾರಿಸಿದ ಈ ಚಿತ್ರ ಚಿತ್ರಪ್ರೇಮಿಗಳ ಫೇವರಿಟ್ ಚಿತ್ರಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಈಗ ಈ ಚಿತ್ರವನ್ನು ರಂಗಭೂಮಿ ಪ್ರೇಕ್ಷಕರಿಗಾಗಿ ಪೋರ್ಥ್ ಕಾರ್ನರ್ ತಂಡ ತಂದಿದೆ. ಅ.30, 31 ಹಾಗೂ ನ.1 ರಂದು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. id="toptextpromo">ಪ್ರತಿ
ನಿತ್ಯ ಸುತ್ತಮುತ್ತಲಿನ ಸಂಸಾರದಲ್ಲಿ ನಡೆಯುವ ಘಟನೆಗಳನ್ನು ಈ ನಾಟಕ ಹೊಂದಿದ್ದು, ಕೌಟುಂಬಿಕ ವರ್ಗಕ್ಕೆ ಮೆಚ್ಚುಗೆಯಾಗಲಿದೆ. ಸಿನಿಮಾವನ್ನು ಈಗಾಗಲೆ ಜನ ಮೆಚ್ಚಿರುವುದರಿಂದ ನಾಟಕವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯ ಇದ್ದೇ ಇದೆ. ಆದರೆ, ರಂಗಾಸ್ತಕರಿಗೂ ಈ ಕಥೆಯ ಪರಿಚಯದಿಂದ, ಕಾದಂಬರಿ ಹಾಗೂ ಸಿನಿಮಾವನ್ನು ಆಧಾರವಾಗಿಟ್ಟುಕೊಂಡು ನಾಟಕವನ್ನು ರೂಪಿಸಲಾಗಿದೆ ಎಂದು ನಿರ್ದೇಶಕ ಸತೀಶ್ ಚಂದ್ರ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಸ್ಥಳ:
ಕೆ.ಎಚ್. ಕಲಾಸೌಧ, ಹನುಮಂತನಗರ, ಬೆಂಗಳೂರುಸಮಯ: ಸಂಜೆ 7
ದಿನಾಂಕ: ಅ.30, ಅ.31 ಹಾಗೂ ನ.1
ಸಂಪರ್ಕಿಸಿ: ವೆಬ್
:
www.ivcorner.com/hb;
ಮೊಬೈಲ್:
98803
88868,
98804
87682












Click it and Unblock the Notifications