• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭವಿಷ್ಯಗಾರ ಆಕ್ಟೋಪಸ್ ಪೌಲ್ ಇನ್ನು ನೆನಪು ಮಾತ್ರ

By Mahesh
|
Google Oneindia Kannada News
ಒಬೆರ್ಸೆನ್, ಅ.26: ಫೀಫಾ ವಿಶ್ವಕಪ್ 2010 ಕಾಲ್ಚೆಂಡಾಟವನ್ನು ಅದ್ಭುತವಾಗಿ ಆಡಿದವರು ಯಾರು ಎಂಬ ಪ್ರಶ್ನೆಗೆ ಎಂಟು ಕಾಲುಗಳ ಜೀವಿ ಪೌಲ್ ಎಂಬ ಜಾಣತನದ ಉತ್ತರ ಸಿಗುತ್ತಿತ್ತು. ಏಕೆಂದರೆ ಪೌಲ್ ಸೂಚಿಸಿದ ಭವಿಷ್ಯ ನೂರರಷ್ಟು ನೂರರಷ್ಟು ನಿಜವಾಗಿತ್ತು. ಅಂತಿಮ ಹಣಾಹಣಿಯಲ್ಲಿ ಹಾಲೆಂಡ್ ಅನ್ನು ಮಣಿಸಿ ಸ್ಪೇನ್ ಕಪ್ ಎತ್ತಲಿದೆ ಎಂದು ಪೌಲ್ ಸೂಚಿಸಿದಂತೆ ನಡೆಯಿತು. ತನ್ನಷ್ಟಕ್ಕೆ ತಾನು ಪಶ್ಚಿಮ ಜರ್ಮನಿಯ ಸೀ ಲೈಫ್ ಅಕ್ವೇರಿಯಂನಲ್ಲಿ ಈಜಾಡುತ್ತಿರುವ ಪೌಲ್ ಇಡೀ ವಿಶ್ವದ ಗಮನ ಸೆಳೆದಿತ್ತು. ಈ ಜನಪ್ರಿಯ ಜೀವಿ ಈಗ ನೆನಪು ಮಾತ್ರ ಉಳಿದಿದೆ. ಕಳೆದ ರಾತ್ರಿ ಆಕ್ಟೋಪಸ್ ಪೌಲ್ ಮೃತಪಟ್ಟಿರುವುದನ್ನು ಎಂದು ಇಲ್ಲಿನ ಆಕ್ವೇರಿಯಂ ಅಧಿಕಾರಿಗಳು ದೃಢಪಡಿಸಿದ್ದಾರೆ.

ಜರ್ಮನ್ನರ ಕೋಪಕ್ಕೆ ತುತ್ತಾಗಿತ್ತು: ಸೆಮಿಫೈನಲ್ಸ್ ನಲ್ಲಿ ಸ್ಪೇನ್ ವಿರುದ್ಧ ಜರ್ಮನಿ ಸೋಲುವುದು ಎಂದು ಸೂಚಿಸಿದ್ದ ಪೌಲ್ ವಿರುದ್ಧ ಜರ್ಮನ್ ಅಭಿಮಾನಿಗಳು ಕೆಂಡ ಕಾರಿದ್ದರು. ಕೆಲವರು ಪೌಲ್ ಅನ್ನು ಕೊಚ್ಚಿ ತಿಂದು ಹಾಕಲು ಸಿದ್ಧರಾಗಿದ್ದರು. ಆದರೆ ಮೂರನೇ ಹಾಗೂ ನಾಲ್ಕನೇ ಸ್ಥಾನಕ್ಕೆ ನಡೆಯುವ ಜರ್ಮನ್ ಹಾಗೂ ಉರುಗ್ವೆ ಹಣಾಹಣಿಯಲ್ಲಿ ಜರ್ಮನಿ ಗೆದ್ದು ಮೂರನೇಸ್ಥಾನ ಪಡೆಯಲಿದೆ ಎಂದು ಆಕ್ಟೋಪಸ್ ಸೂಚಿಸಿದ್ದು, ಅಭಿಮಾನಿಗಳ ಆಕ್ರೋಶ ತಣ್ಣಗಾಗುವಂತೆ ಮಾಡಿತ್ತು.

ಭವಿಷ್ಯ ಹೇಳುತ್ತಿದ್ದ ಪರಿ:ಕಪ್ಪೆಚಿಪ್ಪಿನ ಆಹಾರ ಹೊಂದಿರುವ ಎರಡು ಡಬ್ಬಿಗಳನ್ನು ಆಕ್ಟೋಪಸ್ ನ ಮುಂದಿರಿಸಲಾಗುತ್ತಿತ್ತು. ಈ ಡಬ್ಬಿಗೆ ಜರ್ಮನ್ ಹಾಗೂ ಎದುರಾಳಿ ತಂಡದ ಬಾವುಟವನ್ನು ಹೊದೆಸಿರಲಾಗುತ್ತದೆ. ಪೌಲ್ ಇರುವ ನೀರಿನ ಜಾಡಿಯಲ್ಲಿ ಈ ಎರಡು ಡಬ್ಬಿಯನ್ನು ಇಳಿಬಿಡಲಾಗುತ್ತದೆ. ಯಾವ ಡಬ್ಬಿಯಲ್ಲಿನ ಆಹಾರವನ್ನು ಪೌಲ್ ಸೇವಿಸುತ್ತಾನೋ ಆ ತಂಡ ವಿಜಯಿಯಾಗುತ್ತದೆ ಎಂದು ತಿಳಿಯಲಾಗುತ್ತದೆ.

ಯಾರು ಈ ಪೌಲ್ :
ಇಂಗ್ಲೆಂಡ್ ನಲ್ಲಿ ಹುಟ್ಟಿದ ಈ ಆಕ್ಟೋಪಸ್, ಜರ್ಮನಿನ ಸೀ ಲೈಫ್ ಅಕ್ವೇರಿಯಂನಲ್ಲಿತ್ತು. ಅಲ್ಲಿನ ಆತನ ಪಾಲಕರಿಗೆ ಪೌಲ್ ಭವಿಷ್ಯ ಹೇಳುವ ಐಡಿಯಾ ಹೊಳೆಯಿತು ಎಂಬುದು ಇನ್ನೂ ತಿಳಿದಿಲ್ಲ. ಅರ್ಜೆಂಟೀನಾ ವಿರುದ್ಧ ಜರ್ಮನಿನ ವಿಜಯ ಎಂದು ಸೂಚಿಸಿದ್ದ ಪೌಲ್ ಸೋತಿದ್ದು ಕಮ್ಮಿ, ಹಾಗಾಗಿ ಜಗತ್ತಿನಾದ್ಯಂತ ಕುತೂಹಲಕಾರಿ ಜೀವಿಯಾಗಿತ್ತು.

ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು

ವಿಶ್ವಕಪ್ ಗಿಂತ ಪೌಲ್ ಭವಿಷ್ಯ ಹೇಳುವ ಬಗ್ಗೆ ಜನರಲ್ಲಿ ಹೆಚ್ಚಿನ ಕ್ರೇಜ್ ಉಂಟಾಗಿತ್ತು. ಮಾಧ್ಯಮಗಳಲ್ಲಿ ಪೌಲ್ ದಿಢೀರ್ ಸಾವು ಎಂದು ಬಿತ್ತರಿಸುತ್ತಿದ್ದರೂ, ಸೀ ಲೈಫ್ ಕೇಂದ್ರದ ಸಿಬ್ಬಂದಿಗಳಿಗೆ ಮಾತ್ರ ಪೌಲ್ ಸಾವಿನ ಮುನ್ಸೂಚನೆ ಇತ್ತು. ಸಾಮಾನ್ಯವಾಗಿ ಆಕ್ಟೋಪಸ್ ಗಳಿಗೆ ಎರಡು, ಎರಡೂವರೆ ವರ್ಷ ಮಾತ್ರ ಆಯಸ್ಸು ಎಂಬ ಅರಿವುಳ್ಳವರು ಇದು ಸಹಜ ಸಾವು ಎಂಬುದು ತಿಳಿದಿದೆ ಎಂದು ಅಧಿಕಾರಿ ಸ್ಟೀಫನ್ ಪೊರ್ ವೆಲ್ ಹೇಳಿದ್ದಾರೆ.

ಸ್ಮಾರಕ, ಕಿರುಚಿತ್ರ ಗೌರವ: ಪ್ರತ್ಯೇಕವಾಗಿ ಅಂತಿಮ ಸಂಸ್ಕಾರ ವಿಧಿ ನೆರವೇರಿಸಿ, ಸ್ಮಾರಕ ಸ್ಥಾಪಿಸಲು ಸೀ ಲೈಫ್ ಕೇಂದ್ರ ಸಜ್ಜಾಗಿದೆ. ಮುಂದಿನ ವರ್ಷ ಭವಿಷ್ಯಗಾರ ಆಕ್ಟೋಪಸ್ ಪೌಲ್ ಕುರಿತ ಕಿರುಚಿತ್ರ ಕೂಡಾ ತೆರೆ ಕಾಣಲಿದೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

English summary
Paul the Octopus - the shining beacon and arguably the biggest star to emerge from the 2010 World Cup in South Africa - has died, his aquarium has confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X