ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಮುನಾ ಮೇಲೆ ಸಾಮೂಹಿಕ ಆತ್ಯಾಚಾರ?

By Mahesh
|
Google Oneindia Kannada News

Yamuna Naik source: sahilonline
ಭಟ್ಕಳ, ಅ.26: ಮುರ್ಡೇಶ್ವರದಲ್ಲಿ ಭಾನುವಾರ ನಡೆದ ಕೆಲಸದಾಕೆ ಯಮುನಾ ನಾಯ್ಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕು ಗೊಂಡಿದ್ದು. ಯಮುನಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ನಂತರ ಕೊಲೆ ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಕೊಲೆ ಪ್ರಕರಣದ ತನಿಖೆಗಾಗಿ ಐವರು ಪರಿಣಿತರ ತಂಡ ರಚಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಇನ್ನೆರಡು ದಿನಗಳಲ್ಲಿ ಬರುವ ನಿರೀಕ್ಷೆಯಿದೆ. ಮಂಗಳೂರಿನ ವಿಧಿವಿಜ್ಞಾನ ತಂಡದವರು ಸೋಮವಾರದಂದು ಮೃತ ದೇಹ ದೊರೆತ ಫಾತಿಮಾ ಮಂಝಿಲ್ ಮನೆಯನ್ನು ಸಂಪೂರ್ಣವಾಗಿ ಶೋಧಿಸಿದ್ದಾರೆ. ಮನೆಯ ಬೆಡ್ ರೂಂ, ಅಡುಗೆ ಮನೆ, ಹಾಗೂ ಮೃತದೇಹ ದೊರೆತ ಸ್ಥಳವನ್ನು ತಜ್ಞ ಶ್ವಾನದಳದ ಜೊತೆ ಶೋಧನೆ ಮಾಡಲಾಗಿದೆ.

ಶಾಸಕರಿಂದ ಸಾಂತ್ವನ:
ಮೃತ ಯಮುನಾಳ ಮನೆಗೆ ಶಾಸಕ ಜೆ.ಡಿ.ನಾಯ್ಕ, ಸೋಮವಾರ ಸಂಜೆ ಭೇಟಿ ನೀಡಿ ಆಕೆಯ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕಂಡು ಮಾತನಾಡಿದ ಅವರು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿದರು.

ಸಹಜ ಸ್ಥಿತಿಯತ್ತ ಮುರ್ಡೇಶ್ವರ: ಮುರ್ಡೇಶ್ವರದಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತಾ, ಹೆಚ್ಚುವರಿ ಎಸ್ಪಿ ವಿ.ಬಿ.ಗಾಂವ್ಕರ್, ಭಟ್ಕಳ ಉಪಾವಿಭಾಗಾಧಿಕಾರಿ ಡಾ. ಅನುರಾಧಾ, ತಹಸೀಲ್ದಾರ ಗಾಯತ್ರಿ ನಾಯಕ ಅವರ ಉಪಸ್ಥಿತಿಯಲ್ಲಿ ಸೋಮವಾರ ಸಂಜೆ ಹಿಂದೂ ಹಾಗೂ ಮುಸ್ಲಿಮ್ ಮುಖಂಡರ ಶಾಂತಿ ಸಭೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಗಾಳಿ ಸುದ್ದಿಗೆ ಕಿವಿ ಕೊಡದಂತೆ ಅಧಿಕಾರಿಗಳು ವಿನಂತಿಸಿಕೊಂಡರು.

ಇದಕ್ಕೂ ಮುನ್ನ ಭಟ್ಕಳದ ಮಜ್ಲಿಸೆ-ಇ-ಇಸ್ಲಾಹ್ ತಂಝೀಮ್ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಇದು ಅಮಾನವೀಯ ಕೃತ್ಯ. ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸಬೇಕು, ಇದಕ್ಕಾಗಿ ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X