'ಇಟ್ಟುಕೊಂಡವಳು' ಪದ ಬಳಕೆಗೆ ತೀವ್ರ ಆಕ್ಷೇಪ

ವಿವಾಹಿತ ಪುರುಷರ ಜೊತೆ ಸಹಬಾಳ್ವೆ ನಡೆಸುವ ಮಹಿಳೆ ಜೀವನಾಂಶ ಪಡೆಯಲು ಅನರ್ಹಳು ಎಂದು ತೀರ್ಪು ನೀಡಿದ ಸಂದರ್ಭದಲ್ಲಿ ನ್ಯಾಯಪೀಠವು 'ಇಟ್ಟುಕೊಂಡವಳು' ಎಂಬ ಪದ ಬಳಕೆ ಮಾಡಿತ್ತು. ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಟು ಮತ್ತು ಟಿ ಎಸ್ ಠಾಕೂರ್ ಅವರನ್ನು ಒಳಗೊಂಡ ನ್ಯಾಯಪೀಠದ ಎದುರು ಇಂದಿರಾ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತದ ಸುಪ್ರೀಂ ಕೋರ್ಟ್ 'ಇಟ್ಟುಕೊಂಡವಳು' ಎಂಬ ಪದ ಬಳಸುತ್ತಿರುವ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ ಅವರು, ಮಹಿಳೆಯೊಬ್ಬಳು 'ಇಟ್ಟುಕೊಂಡವನು' ಎಂಬ ಪದ ಬಳಸಬಹುದೇ ಎಂದು ಪ್ರಶ್ನಿಸಿದ್ದಾರೆ.
ನ್ಯಾಯಪೀಠದ ನ್ಯಾಮಮೂರ್ತಿ ಠಾಕೂರ್ ಅವರು 'ಇಟ್ಟುಕೊಂಡವಳು' ಪದ ಬಳಕೆಗೆ ಬದಲಾಗಿ ಉಪಪತ್ನಿ ಪದ ಬಳಸಿದರೆ ಸರಿಯಾದೀತೆ ಎಂದು ಕೇಳಿದರು. ಜೀವನಾಂಶಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನಲ್ಲಿ 'ಇಟ್ಟುಕೊಂಡವಳು' ಎಂಬ ಪದ ಬಳಕೆಗೆ ಮಾತ್ರ ನನ್ನ ಆಕ್ಷೇಪ ಎಂದಿದ್ದಾರೆ ಇಂದಿರಾ.












Click it and Unblock the Notifications