ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರ ಅಸ್ಥಿರಗೊಳಿಸುವ ಯತ್ನ ತಪ್ಪು : ಅನಂತಮೂರ್ತಿ

By Mrutyunjaya Kalmat
|
Google Oneindia Kannada News

UR Ananthmurthy
ಬೆಂಗಳೂರು, ಅ. 18 : ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದ ಸರಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳು ಯತ್ನಿಸಿದ್ದು ತಪ್ಪು ಎಂದು ಹಿರಿಯ ಸಾಹಿತಿ ಯು ಆರ್ ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಡಾ.ರಾಮ ಮನೋಹರ ಲೋಹಿಯಾ ಜನ್ಮ ಶತಮಾನೋತ್ಸವ ಅಂಗವಾಗಿ ರಾಜ್ಯ ದಲಿತ ಸಂಘರ್ಷ ಸಮಿತಿ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಲೋಹಿಯಾ ಮತ್ತು ಅಂಬೇಡ್ಕರ್ ಆಶಯದ ಪ್ರಸ್ತುತತೆ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಸರಕಾರ ಉರುಳಿಸಲು ಪ್ರತಿಪಕ್ಷಗಳು ತಪ್ಪು ಮಾಡಿದರೆ, ಎಲ್ಲ ಪಕ್ಷಗಳ ಶಾಸಕರು ರೆಸಾರ್ಟ್ ರಾಜಕಾರಣದತ್ತ ತೆರಳಿದ್ದೂ ತಪ್ಪು ಎಂದು ಹೇಳಿದರು.

ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗರ ಅಜೆಂಡಾ ಅಡಗಿರುವುದು ಜನರಿಗೆ ಗೊತ್ತಾಗಿದೆ. ಕುರುಬ ಸಮುದಾಯದ ಪಾತ್ರವೂ ಇದರಲ್ಲಿದೆ ಎಂದರು. ದಲಿತ ಎಂಬುದು ಸಾಮಾಜಿಕ ಸಮಸ್ಯೆ ಮಾತ್ರವಲ್ಲ, ಮನಸ್ಸಿನ ಸಮಸ್ಯೆ ಕೂಡಾ. ಅಂಬೇಡ್ಕರ್ ದಲಿತರಿಗೆ ಮಾತ್ರ ನಾಯಕರಲ್ಲ, ರಾಷ್ಟ್ರ ನಾಯಕರು. ಶ್ರಮಣ ಮತ್ತು ವೈದಿಕ ವಿಚಾರಧಾರೆ ಎಂಬ ಎರಡು ವಿಭಾಗಗಳು ಸಮಾಜದಲ್ಲಿವೆ ಎಂದು ಹೇಳಿದರು.

ಕಲಿತವರ ಇಂಡಿಯಾ ಮತ್ತು ಬಡವರ ಭಾರತ ಎಂಬ ಇಬ್ಭಾಗ ಮಾಯವಾಗಿ ಎಲ್ಲರೂ ಒಂದೇ ಎಂಬುದು ಭಾರತದ ಧ್ವನಿಯಾಗಬೇಕು. ಅಂತರ್ಜಾತಿ ವಿವಾಹ ಹೆಚ್ಚಿಸುವ ಮೂಲಕ ಜಾತಿಗಳ ನಡುವೆ ಅಂತರ ಕಡಿಮೆಗೊಳಿಸಬೇಕು. ಅಂಬೇಡ್ಕರ್ ಮತ್ತು ಲೋಹಿಯಾ ಕೂಡಿದ ಸರ್ವೋದಯ ಎಂಬ ಹೊಸ ವೈಚಾರಿಕತೆಗೆ ಯುವಕರು ತಯಾರಿರಬೇಕು ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X