ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರಕ್ಕೆ ನೂರು ನಮಗೆ ಗೆಲುವು: ರೆಡ್ಡಿ ವಿಶ್ವಾಸ

By Mahesh
|
Google Oneindia Kannada News

Yeddyurappa faces second floor test today‎
ಬೆಂಗಳೂರು, ಅ.14: ಸುಮಾರು 18 ಸಾವಿರ ಸಿವಿಎಲ್ ಪೊಲೀಸರ ಸರ್ಪಗಾವಲಿನ ನಡುವೆ ಬಂಧಿಯಾಗಿರುವ ವಿಧಾನಸೌಧದಲ್ಲಿ ಇಂದು ಮಹತ್ವದ ಅಧಿವೇಶನ ನಡೆಯಲು ವೇದಿಕೆ ಸಜ್ಜಾಗಿದೆ.'ನಿಷ್ಠಾವಂತ' ವರ್ತೂರು ಪ್ರಕಾಶ್ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸುವ ವಿಶ್ವಾಸದಿಂದಿರುವ ಸಿಎಂ, ಗಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.ಗೋಲಿ ಆಟದ ಕಾಲದಿಂದ ಸೋಲರಿಯದ ಸರದಾರ, ಸಂಧಾನ ಶೂರ ಗಾಲಿ ಜನಾರ್ದನ ರೆಡ್ಡು ಅವರು 'ನೂರಕ್ಕೆ ನೂರು ನಮಗೆ ಗೆಲುವು' ಎಂದು ಹೇಳಿದ್ದಾರೆ. ಪ್ರತಿಪಕ್ಷಗಳು ಇಂದಿನ ವಿಶ್ವಾಸಮತ ಯಾಚನೆ ಫೈನಲ್ ಗೆ ರಿಹರ್ಸಲ್ ಆಗಿ ಪರಿಗಣಿಸಿವೆ.

ವಿಶ್ವಾಸಮತ ಗಳಿಸಿದ ನಾಲ್ಕನೇ ದಿನಕ್ಕೆ ಮತ್ತೊಮ್ಮೆ ಬಹುಮತ ಸಾಬೀತು ಪಡಿಸುವ ಮೂಲಕ ದಾಖಲೆ ಮೆರೆಯುವ ಉತ್ಸಾಹ ಯಡಿಯೂರಪ್ಪ ಅವರಲ್ಲಿದೆ. ನೂರು ಬಾರಿ ಬೇಕಾದರೂ ಬಹುಮತ ಸಾಬೀತುಪಡಿಸಲು ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಮೂರು ಬಸ್ ಗಳಲ್ಲಿ ಬಿಜೆಪಿ ಶಾಸಕರನ್ನು ಕರೆದುಕೊಂಡು ವಿಧಾನಸೌಧದ ಕಡೆಗೆ ಹೊರಟಿದ್ದಾರೆ.

50 ಕೆಎಸ್ ಆರ್ ಪಿ 20 ಸಿಎಆರ್ ಪಡೆಗಳ ಭದ್ರತೆಯಿದ್ದು, ವಿಮಾನನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ನೀಡುವ ವ್ಯವಸ್ಥೆಯಂತಿದ್ದು, ಸದನದ ಗೌರವ ಕಾಯುವ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ ಮಾರ್ನಿಂಗ್ ವಾಕ್ ಮಾಡುತ್ತಾ ವಿಧಾನಸೌಧ ದ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕಲಾಪದ ನೇರ ಪ್ರಸಾರಕ್ಕೆ ನಿರ್ಬಂಧ ಹೇರಿದ್ದ ಸ್ಪೀಕರ್‌ ಗುರುವಾರದ ಕಲಾಪ ನೇರ ಪ್ರಸಾರ ಮಾಡಲು ಅನುಮತಿ ನೀಡಿದ್ದಾರೆ. ಆದರೆ ಮಾಧ್ಯಮಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶಾಸಕರು, ಸಚಿವರಿಗೆ ವಿಧಾನಸೌಧಕ್ಕೆ ಆಗಮಿಸಲು ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ. ಆದರೆ ಮುಖ್ಯಮಂತ್ರಿಗಳು, ಸ್ಪೀಕರ್‌, ವಿಧಾನಸಭೆ ಸಭೆ ವಿರೋಧ ಪಕ್ಷದ ನಾಯಕರು, ಸದನದ ನಾಯಕರು ತಮ್ಮ ಕಾರಿನಲ್ಲಿಯೇ ವಿಧಾನಸೌಧದವರೆಗೂ ಬರುವ ಅವಕಾಶವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X