ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್ ವೆಲ್ತ್ : ಅಂತಿಮ ದಿನವೂ ಭಾರತಕ್ಕೆ ಶುಭಕರ

By Mahesh
|
Google Oneindia Kannada News

Jwala, Ashwini win Badminton Doubles Final
ನವದೆಹಲಿ, ಅ.14: ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಇಂದು ಅಂತಿಮ ತೆರೆ ಬೀಳಲಿದೆ. 11 ದಿನಗಳ ನಡೆದ ಆಟೋಟಗಳಲ್ಲಿ ಸುಮಾರು 71 ದೇಶಗಳ 7 ಸಾವಿರಕ್ಕೂ ಅಧಿಕ ಕ್ರೀಡಾಳುಗಳು ಪಾಲ್ಗೊಂಡಿದ್ದರು. ಸುಮಾರು 17 ಸ್ಪರ್ಧೆಗಳಲ್ಲಿ 829 ಪದಕಗಳು ಪಣಕ್ಕಿಡಲಾಗಿತ್ತು. ಭಾರತ ಕಂಡ ಅತ್ಯಂತ ದುಬಾರಿ ಕ್ರೀಡಾಕೂಟ ಎಂಬ ಹೆಗ್ಗಳಿಕೆಗೆ ಹಾಗೂ ತೆಗಳಿಕೆ ಪಾತ್ರವಾಗಿತ್ತು. ಸುಮಾರು 70,000 ಕೋಟಿ ವೆಚ್ಚದಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಅಂತಿಮ ದಿನ ಮಾಧ್ಯಮಗಳಿಂದ ಪ್ರಧಾನ ಆಯೋಜಕ ಸುರೇಶ್ ಕಲ್ಮಾಡಿ ದೂರ ಉಳಿದಿದ್ದಾರೆ. ಮಾಧ್ಯಮದವರ ಮಾತಿಗೆ ಸಿಕಿದ್ದು ಕಾಮನ್ ವೆಲ್ತ್ ಫೆಡೆರೇಷನ್ ಅಧ್ಯಕ್ಷ ಮೈಕಲ್ ಫೆನ್ನೆಲ್ , ಸಿಇಒ ಮೈಕಲ್ ಹೂಪರ್ ಮಾತ್ರ. ನಮಗೆ ವಿಶ್ವಾಸವಿತ್ತು. ಒಟ್ಟಾರೆ ಅಥ್ಲೀಟ್ ಗಳು ಖುಷಿಯಾಗಿ ತೆರಳಿದ್ದಾರೆ. ಕಾಮನ್ ವೆಲ್ತ್ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದು ಫೆನ್ನೆಲ್ ಘೋಷಿಸಿದರು. ಸುಮಾರು 5 ಸಾವಿರ ಕ್ರೀಡಾಳುಗಳು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಓದಿ:
2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು

ದಿನದ ವಿಶೇಷ: ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತ ಆಸ್ಟ್ರೇಲಿಯಾ ಹಾಕಿ ಫೈನಲ್ ಪಂದ್ಯ ವೀಕ್ಷಿಸಿದ್ದು ಇಂದಿನ ವಿಶೇಷ. ಆದರೆ, ಚಿನ್ನದ ಗೆಲ್ಲುವ ಆಸೆ ಹುಟ್ಟ್ಟಿಸಿದ್ದ ಹಾಕಿ ತಂಡ, ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾಕ್ಕೆ 8-0ಅಂತರದಿಂದ ಸೋತು ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಸೂಪರ್ ಸೈನಾ: ಬಾಡ್ಮಿಂಟನ್ ಸಿಂಗಲ್ಸ್ ಫೈನಲ್ ನಲ್ಲಿ ಸೈನಾ ನೆಹ್ವಾಲ್ ಅವರು ಮಲೇಷಿಯಾದ ಮಿಯೂ ಚೂ ವಾಂಗ್ ಅವರು 19-21, 23-21, 21-13 ಅಂತರದಿಂದ ಸೋಲಿಸಿ ಚಿನ್ನದ ಪದಕ ಗಳಿಸಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ ಇಂಗ್ಲೆಂಡ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಭಾರತ ಜಿಗಿದಿದೆ.ಒಟ್ಟು 38 ಚಿನ್ನ, 27 ಬೆಳ್ಳಿ ಮತ್ತು 34 ಕಂಚಿನೊಂದಿಗೆ ಶತಕದ(101 ಪದಕ) ಗಡಿ ದಾಟಿ ಮುನ್ನುಗ್ಗಿದ ದಾಖಲೆ ಮೆರೆದಿದೆ.

ಚಿನ್ನದ ಹುಡುಗಿಯರು: ಬಾಡ್ಮಿಂಟನ್ ಮಹಿಳೆಯ ಡಬಲ್ಸ್ ನಲ್ಲಿ ಭಾರತದ ಎರಡನೇ ಸೀಡ್ ನ ಜ್ವಾಲಾ ಗುಟ್ಟಾ, ಕನ್ನಡತಿಅಶ್ವಿನಿ ಪೊನ್ನಪ್ಪ ಜೋಡಿ 21-16 21-19.ಸೆಟ್ ಗಳ ಮೂಲಕ ಸಿಂಗಪುರದ ಶಾಂತಿ-ಲೈ ಜೋಡಿಯನ್ನು ಮಣಿಸಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.

ಇದಕ್ಕೂಮುನ್ನ ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಅಚಂತಾ ಶರತ್ ಕಮಾಲ್ ಅವರು ಎದುರಾಳಿ ಭಾರತದವರೇ ಆದ ಸೌಮ್ಯದೀಪ್ ರಾಯ್‌ರನ್ನು ಮಣಿಸುವ ಮೂಲಕ ದೇಶಕ್ಕೆ 100ನೇ ಪದಕವನ್ನು ಗೆದ್ದುಕೊಟ್ಟರು.

ವೈವಿಧ್ಯಮಯ ಸಂಗೀತ ಕಾರ್ಯಕ್ರಮಗಳು: ಚಕ್ ದೆ ಚಕ್ ದೆ ಇಂಡಿಯಾ ಗೀತೆ, ಸೂಫಿ ,ಶಾಸ್ತ್ರೀಯ ಸಂಗೀತ, ಸ್ಕಾಟ್ ಲ್ಯಾಂಡ್ ನ ಸಾಂಪ್ರದಾಯಿಕ ಬ್ಯಾಗ್ ಪೈಪರ್ ಸಂಗೀತ ಪ್ರೇಕ್ಷಕರ ಮನತಣಿಸಲಿದೆ. 2,010 ಶಾಲಾ ಮಕ್ಕಳಿಂದ 'ವಂದೇ ಮಾತರಂ' ಗೀತೆಗೆ 50 ನಿಮಿಷಗಳ ನರ್ತನ ಪ್ರದರ್ಶನವಿದೆ. ಕೇರಳ, ಪಂಜಾಬ್, ಮಣಿಪುರ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಹಾಗೂ ತಮಿಳುನಾಡಿನ ಸುಮಾರು 800 ಸಮರಕಲೆ ತಜ್ಞರಿಂದ 'ಅಗ್ನಿ' ಎಂಬ ಹೆಸರಿನಲ್ಲಿ ಅಮೋಘ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

ಶಂಕರ್ ಮಹಾದೇವನ್, ಸುನೀಧಿ ಚೌಹಾಣ್, ಇಂಡಿಯನ್ ಐಡಲ್ ವಿಜೇತ ಶ್ರೀರಾಮ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರ ಸಂಗೀತ ಲಹರಿ ಹರಿಯಲಿದೆ. ಉಳಿದಂತೆ ಬಿರಿಸು ಬಾಣಗಳು, ಲೇಸರ್ ಷೋ ಎಲ್ಲರ ಮನಸೂರೆ ಮಾಡಲಿದೆ.

English summary
It"s the final day of the Commonwealth Games and with 38 gold(Saina winning Badminton Final) India is ahead of England in medals tally. CWG success brings Kalmadi, Hooper back together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X