ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಶಾಸಕ ವಜ್ಜಲ್, ಜೆಡಿಎಸ್ ಅಶ್ವಥ್ ಗೈರು

By Mahesh
|
Google Oneindia Kannada News

MLA Manappa vajjal back in bjp camp
ಬೆಂಗಳೂರು, ಅ.14: ಬಿಜೆಪಿ ವಿರುದ್ಧ ಬಂಡಾಯವೆದ್ದರೆ ಏನು ಗಿಟ್ಟಲ್ಲ ಎಂಬ ಬಹಿರಂಗ ಗುಟ್ಟನ್ನು ಅರಿತ ಶಾಸಕ ವಜ್ಜಲ್ ಭಿನ್ನರ ಗುಂಪನ್ನು ತೊರೆದಿದ್ದಾರೆ. ಪಕ್ಷದ 11ಜನ ಬಂಡಾಯ ಶಾಸಕರ ಅನರ್ಹತೆ ಸಿಂಧುವಾಗುತ್ತದೆ ಎಂಬುದು ಖಚಿತವಾಗುತ್ತಿದ್ದಂತೆ ವಜ್ಜಲ್‌ ಅವರು ಸದ್ದಿಲ್ಲದೇ ಬಿಜೆಪಿ ಬಾವುಟ ಹಿಡಿದು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರಿಗೆ ಅಡ್ಡಬಿದ್ದಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ, ಸದನದ ಕಲಾಪಕ್ಕೆ ಗೈರು ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ. ಇದರ ಜೊತಗೆ ಚನ್ನಪಟ್ಟಣ ಜೆಡಿಎಸ್ ಶಾಸಕ ಎಂಸಿ ಅಶ್ವಥ್ ಕೂಡ ಸದನದಲ್ಲಿ ಕಂಡುಬಂದಿಲ್ಲ.

ಬುಧವಾರವೇ ಗೋಲ್ಡನ್ ಪಾಮ್ ರೆಸಾರ್ಟ್ ಸೇರಿದ್ದರೂ ಶಾಸಕರ ಭವನದಲ್ಲಿರುವ ವಜ್ಜಲ್ ಅವರ ಕೊಠಡಿಗೆ ವಿಪ್ ಪ್ರತಿ ಅಂಟಿಸಲಾಗಿತು. ವಾಪಾಸ್ ಬಂದು ಸ್ಸಾರಿ ಕೇಳಿದರೆ ಒಪ್ಪುತ್ತೇವೆ ಎಂದು ಬಿಜೆಪಿ ಮುಖ್ಯ ಸಚೇತಕ ಡಿಎನ್ ಜೀವರಾಜ್ ಹೇಳಿದಂತೆ, ಅಕ್ಷರಶಃ ಪಾಲಿಸಿದ ಮಾನಪ್ಪ ಮಾನ ಉಳಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಸದನದಲ್ಲಿ ತಲೆ ಎಣಿಕೆ ಸಂದರ್ಭದಲ್ಲಿ ವಜ್ಜಲ್, ಅಶ್ವಥ್ ಕಾಣೆಯಾಗಿರುವುದು ದೃಢಪಟ್ಟಿದೆ.

ಈ ನಡುವೆ ಸದನ ಪ್ರವೇಶಿಸಲು ಮೀನಾ ಮೇಷ ಎಣಿಸುತ್ತಿದ್ದ ಕಾಂಗ್ರೆಸ್ ಜೆಡಿಎಸ್ ಶಾಸಕರು ಕೆಂಗಲ್‌ ಹನುಮಂತಯ್ಯ ಪ್ರತಿಮೆ ಇರುವ ಪಶ್ಚಿಮ ದ್ವಾರದ ಮೂಲಕ ಪ್ರವೇಶಿಸಿದ್ದಾರೆ. ವಿಧಾನಸಭೆ ಸಚಿವಾಲಯ ಸಿಬ್ಬಂದಿ ಮತ್ತು ಪೂರ್ವ ದ್ವಾರದಿಂದ ಮಾಧ್ಯಮದವರು ಈಗಾಗಲೆ ಸದನಕ್ಕೆ ಬಂದಿದ್ದಾರೆ.

ಸಚಿವರು, ಶಾಸಕರ ಗನ್‌ಮ್ಯಾನ್‌ಗಳು, ಆಪ್ತಕಾರ್ಯದರ್ಶಿಗಳು ವಿಧಾನಸಭೆ ಮೊಗಸಾಲೆ ಪ್ರವೇಶಿಸಲು ಅವಕಾಶ ನೀಡಿಲ್ಲದಿರುವುದು. ಭದ್ರತಾ ಸಿಬ್ಬಂದಿ ಚೆಕ್ಕಿಂಗ್ ಸಾಂಗವಾಗಿ ಸಾಗಿದೆ. ನಿಗದಿತ ಸಮಯಕ್ಕೆ ಕಲಾಪ ಆರಂಭಗೊಂಡಿದೆ.

ಅ.11ರ ಸೋಮವಾರದ ಘಟನೆಯಲ್ಲಿ ಅಮಾನತುಗೊಂಡ ಶಾಸಕರ ಬಲತ್ಕಾರದಿಂದ ಹಾನಿಗೊಳಗಾದ ವಿಧಾನ ಸಭಾಂಗಣ ಪ್ರವೇಶಿಸುವ ಕಬ್ಬಿಣದ ಗೇಟನ್ನು ಸಿಬ್ಬಂದಿ ಬುಧವಾರ ದುರಸ್ಥಿಗೊಳಿಸಿದ್ದಾರೆ. ಈ ಗೇಟಿನ ಬಳಿ ಪೊಲೀಸ್‌ ಬಲ ಹೆಚ್ಚಿಸಲಾಗಿದೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X