ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಕಪ್ಪು ಮಸಿ ಬಳಿದ ನಡಿಗೆ ರಾಣಿ

By Mahesh
|
Google Oneindia Kannada News

Rani Yadav fails dope test at CWG
ನವದೆಹಲಿ, ಅ.13: ಭಾರತದ ಅಥ್ಲೀಟ್ ಗಳು ಚಿನ್ನದ ಬೇಟೆ ಮುಂದುವರೆಸಿ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ ಬೆನ್ನಲ್ಲೇ, ರಾಣಿ ಯಾದವ್ ಎಂಬ ಅಥ್ಲೀಟ್ ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್ ಎಂದು ದೃಢಪಟ್ಟಿದೆ. ನಿಷೇಧಿತ ಔಷಧಿ(nandrolone) ಸೇವನೆಯಿಂದ 20 ಕಿ.ಮೀ ದೂರದ ನಡಿಗೆ ಸ್ಪರ್ಧೆಯಲ್ಲಿ ರಾಣಿ ಭಾಗವಹಿಸಿದ್ದರು. ಇದಲ್ಲದೆ ನೈಜೀರಿಯಾದ ಇಬ್ಬರು ಅಥ್ಲೀಟ್ ಗಳು ಗಳಿಸಿದ್ದ ಪದಕಗಳನ್ನು ಹಿಂಪಡೆಯಲಾಗಿದೆ ಎಂದು ಕಾಮನ್ ವೆಲ್ತ್ ಗೇಮ್ಸ್ ಫೆಡೆರೇಷನ್ ಅಧ್ಯಕ್ಷ ಮೈಕ್ ಫೆನ್ನೆಲ್ ಸುದ್ದಿಗಾರರಿಗೆ ತಿಳಿಸಿದರು.

ಆದರೆ, ಇದರಿಂದ ಭಾರತದ ಪದಕ ಪಟ್ಟಿಯಲ್ಲಿ ಯಾವುದೆ ವ್ಯತ್ಯಾಸವಾಗುವುದಿಲ್ಲ. 20ಕಿ.ಮೀ ದೂರದ ನಡಿಗೆಯಲ್ಲಿ ರಾಣಿ, ಪದಕ ಗಳಿಸುವಲ್ಲಿ ವಿಫಲರಾಗಿ 1:42:54 ಸೆಕೆಂಡ್ ಗಳ ಕಾಲ ತೆಗೆದುಕೊಂಡು 6 ನೇ ಸ್ಥಾನ ಪಡೆದಿದ್ದರು. ಆದರೂ, ಆಕೆಯ ಬಿ ಸ್ಯಾಂಪಲ್ ಅನ್ನು ಹೆಚ್ಚಿನ ತನಿಖೆಗೆ ಕಳಿಸಲಾಗಿದೆ ಎಂದು ಕಾಮನ್ ವೆಲ್ತ್ ಕ್ರೀಡಾಕೂಟದ ಮುಖ್ಯಸ್ಥರು ಹೇಳಿದ್ದಾರೆ.

ನೈಜೀರಿಯಾದ ಒಸಯೆಮಿ ಒಲುಡಮೊಲ ಅವರು ನಿಷೇಧಿತ Methylhexaneamine ಔಷಧಿ ಸೇವಿಸಿದ್ದು ದೃಢಪಟ್ಟಿದ್ದು, ಮಹಿಳೆಯರ 100 ಮೀ ಓಟದಲ್ಲಿ ಆಕೆ ಚಿನ್ನದ ಪದಕ ಗಳಿಸಿದ್ದರು. 110 ಮೀ ಹರ್ಡಲ್ಸ್ ನಲ್ಲಿ ಸ್ಪರ್ಧಿಸಿದ್ದ ನೈಜೀರಿಯಾದ ಒನ್ನೊಬ್ಬ ಕ್ರೀಡಾಳು ಸ್ಯಾಮುಯಲ್ ಒಕಾನ್ ಕೂಡಾ ಅದೇ ನಿಷೇಧಿತ ದ್ರವ್ಯ ಸೇವಿಸಿರುವುದು ಕಂಡು ಬಂದಿದೆ.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X