ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ, ಕರ್ನಾಟಕದ ಪಾಲಿಗೆ ಚಿನ್ನದ ದಿನ

By Mahesh
|
Google Oneindia Kannada News

CWG 2010: 4X400 mts relay winners
ನವದೆಹಲಿ, ಅ.13:ಅಥ್ಲೆಟಿಕ್ಸ್‌ನಲ್ಲಿ 52 ವರ್ಷಗಳ ಬಂಗಾರದ ಪದಕದ ಮರೀಚಿಕೆಯನ್ನು ಕೃಷ್ಣಾ ಪೂನಿಯಾ(ಡಿಸ್ಕಸ್ ಎಸೆತ) ನಿವಾರಿಸಿರುವುದರ ಮರುದಿನವೇ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮತ್ತೊಂದು ಬಂಗಾರ ಲಭಿಸಿದೆ. 4*400 ಮೀ. ರಿಲೇಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದು, ಮತ್ತೊಂದು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಇದರ ಜೊತೆಗೆ ಜ್ವಾಲಾ ಗುಟ್ಟಾ ಜೊತೆ ಕನ್ನಡತಿ ಅಶ್ವಿನಿ ಪೊನ್ನಪ್ಪ ಬಾಡ್ಮಿಂಟನ್ ಡಬಲ್ಸ್ ಫೈನಲ್ ಪ್ರವೇಶಿಸಿದ್ದಾರೆ. ಹಾಕಿಯಲ್ಲಿ ಕನ್ನಡಿಗ ಅರ್ಜುನ್ ಹಾಲಪ್ಪ ಗೋಲು ಹಾಗೂ ಭರತ್ ಛತ್ರಿ ಉತ್ತಮ ಪ್ರದರ್ಶನ ಮೂಲಕ ಭಾರತ ತಂಡ ಹಾಕಿ ಫೈನಲ್ಸ್ ಪ್ರವೇಶಿಸಿದೆ. 19ನೇ ಕಾಮನ್‌ವೆಲ್ತ್ ಕ್ರೀಡೆಗಳ ಅಥ್ಲೆಟಿಕ್ಸ್‌ನಲ್ಲಿ ಬಂದ ಮೊದಲ ಬೆಳ್ಳಿ ಪದಕ ಕೀರ್ತಿ ಎನ್ನಾರೈ ಕನ್ನಡಿಗ ವಿಕಾಸ್ ಗೌಡಗೆ ಸಲ್ಲುತ್ತದೆ.

ಭಾರತ ತಂಡದಲ್ಲಿದ್ದ ಮಂಜೀತ್ ಕೌರ್, ಸಿನಿ ಜೋಸ್, ಸಿದ್ಧಾಪುರದ ಹುಡುಗಿ ಅಶ್ವಿ‌ನಿ ಚಿದಾನಂದ ಅಕ್ಕುಂಜಿ ಮತ್ತು ಮಂದೀಪ್ ಕೌರ್ ನಿಗದಿತ ಗುರಿಯನ್ನು 3:27.37 ನಿಮಿಷದಲ್ಲಿ ತಲುಪಿದರು. ಈ ನಿರ್ವಹಣೆಗಾಗಿ ಭಾರತ ಸ್ವರ್ಣ ಪದಕ ಪಡೆಯುವಂತಾಯಿತು. ಅಥ್ಲೆಟಿಕ್ಸ್ ನಲ್ಲಿ ಭಾರತ ಒಟ್ಟು 1 ಚಿನ್ನ , 4 ಕಂಚು ಗಳಿಸಿದ ಗೌರವ ಪಡೆಯಿತು.

ಎರಡು ಕಂಚು ಭಾರೀ ಕುತೂಹಲ ಕೆರಳಿಸಿದ್ದ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಭಾರತ ಪುರುಷ ಮತ್ತು ಮಹಿಳಾ ಈ ಎರಡೂ ವಿಭಾಗಗಳಲ್ಲಿಯೂ ಕಂಚಿನ ಪದಕ ಗೆದ್ದುಕೊಂಡಿದೆ. ಕಳೆದ ಬಾರಿ ಮೆಲ್ಬೋರ್ನ್ ಗೇಮನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತೀಯ ಮಹಿಳಾ ರಿಲೇ ತಂಡ ಈ ಬಾರಿ ಕಂಚಿಗೆ ತೃಪ್ತಿ ಪಡಬೇಕಾಯಿತು. ಪ್ರಾಥಮಿಕ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರೂ ನಂತರ ನಡೆದ ಅಂತಿಮ ಸುತ್ತಿನಲ್ಲಿ ಭಾರತೀಯ ಮಹಿಳೆಯರು ಮೂರನೇ ಸ್ಥಾನಕ್ಕೆ ಕುಸಿದರು.

ಭಾರತ ತಂಡದಲ್ಲಿದ್ದ ಸತ್ತಿ ಗೀತಾ, ಸ್ರಬಾನಿ ನಂದಾ, ಪಿ.ಕೆ.ಪ್ರಿಯಾ ಮತ್ತು ಕನ್ನಡತಿ ಜ್ಯೋತಿ ಹಿರಿಯೂರ್ 45.25 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು. ಪುರುಷರ ತಂಡವು 38.89 ಸೆಕೆಂಡ್‌ನಲ್ಲಿ ಗುರಿ ತಲುಪಿ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಕಂಚು ಪಡೆಯಿತು.ಈ ಎರಡೂ ವಿಭಾಗದಲ್ಲಿ ಇಂಗ್ಲೆಂಡ್ ಚಿನ್ನದ ಪದಕ ಪಡೆಯಿತು.

ಜಾವೆಲಿನ್‌ ಥ್ರೋ ನಲ್ಲಿ ಕನ್ನಡಿಗ ಕಾಶಿನಾಥ್‌ ನಾಯ್ಕ 74.29ಮೀ. ದೂರ ಭರ್ಜಿ ಎಸೆದು ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಈ ಸ್ಪರ್ಧೆಯಲ್ಲಿ ಚಿನ್ನ ಆಸ್ಟ್ರೇಲಿಯಾದ ಜಾರೋಡ್‌ ಬ್ಯಾನಿಸ್ಟರ್‌ (81.71ಮೀ.) ಪಾಲಾದರೆ, ರಜತ ನ್ಯೂಜಿಲೆಂಡ್‌ನ‌ ಸ್ಟುವರ್ಟ್‌ ಫರ್ಖಾಹರ್‌ಗೆ (78.15) ಒಲಿಯಿತು. ಟ್ರಿಪಲ್‌ ಜಂಪ್‌ನಲ್ಲಿ ಭಾರತದ ರೆಂಜಿತ್‌ ಮಹೇಶ್ವರಿ ಕಂಚಿನ ಪಡೆದ ಸಾಧನೆ ಮೆರೆದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X