ರಾಜಭವನ ಕುದುರೆ ವ್ಯಾಪಾರ ಕೇಂದ್ರ : ಅರುಣ್ ಜೇಟ್ಲಿ

ಆಡಳಿತ ಪಕ್ಷದ ಕನಿಷ್ಠ 6-8 ಮಂದಿಯನ್ನು ತಮ್ಮೆಡೆಗೆ ಸೆಳೆದುಕೊಂಡುಸರ್ಕಾರವನ್ನು ಉರುಳಿಸುವ ಕನಸನ್ನು ವಿರೋಧ ಪಕ್ಷಗಳು ಕಾಣುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ವಿಪಕ್ಷಗಳ ಸಂಚು ನಡೆಯುವುದಿಲ್ಲ ಎಂದು ಜೇಟ್ಲಿ ಹೇಳಿದರು.
ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದು, ಅವರು ಕರ್ನಾಟಕದ ಪ್ರತಿಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ. ತನ್ನ ಸಂವಿಧಾನಿಕ ಜವಾಬ್ದಾರಿಗಳನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಿಲ್ಲ .ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ ಬೆನ್ನಲ್ಲೇ, ಮತ್ತೊಮ್ಮೆ ವಿಶ್ವಾಸಮತ ಯಾಚನೆಗೆ ಸೂಚಿಸಿದ ರಾಜ್ಯಪಾಲರ ಕ್ರಮ ಸರಿಯಿಲ್ಲ.
ನೆನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ. ಸುಭದ್ರ ಸರ್ಕಾರ ಇರಬೇಕು, ಪ್ರಜಾಪ್ರಭುತ್ವ ಉಳಿಯಬೇಕು ಎಂದು ಬಿಜೆಪಿಗೆ ಮತ್ತೊಂದು ಅವಕಾಶ ನೀಡಿದ್ದೇನೆ ಎಂದಿದ್ದಾರೆ. ಬಿಜೆಪಿಗೆ ಕಾನೂನು ಪಾಲಿಸುವುದು, ಸಾಂವಿಧಾನಿಕ ಕಟ್ಟುಪಾಡುಗಳು ಚೆನ್ನಾಗಿ ಗೊತ್ತು ಎಂದು ಜೇಟ್ಲಿ ಪ್ರತಿಕ್ರಿಯಿಸಿದ್ದಾರೆ.
ಪೊಲೀಸ್ ಅಧಿಕಾರಗಳೊಡನೆ ಸಿಎಂ ಸಭೆ : ನಾಳೆ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಪೊಲೀಸ್ ವರಿಷ್ಠರೊಡನೆ ಇಂದು ಮಹತ್ವದ ಸಭೆ ನಡೆಸಿದರು. ಅ.11 ರಂದು ಸದನದಲ್ಲಿ ನಡೆದ ಗಲಭೆ, ಗೊಂದಲಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಅನರ್ಹ ಶಾಸಕರು ಸೇರಿದಂತೆ ಸದಸ್ಯರಲ್ಲದವರನ್ನು ಸದನದ ಒಳಗೆ ಬಿಡದಂತೆ ನಿರ್ಬಂಧ ಹೇರುವಂತೆ ಆದೇಶಿಸಲಾಗಿದೆ. ಶಾಸಕರ ಆಪ್ತ ಕಾರ್ಯದರ್ಶಿ, ಗನ್ ಮ್ಯಾನ್ ಗಳು ಕೂಡಾ ಸದನದ ಹತ್ತಿರ ಸುಳಿಯುವಂತಿಲ್ಲ. ಆದರೆ, ಮಾಧ್ಯಮಗಳಿಗೆ ಪ್ರವೇಶ ನೀಡುವ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.











Click it and Unblock the Notifications