ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಂಡಾಗಿರಿಗೂ ಸೈ, ಹೈಟೆಕ್ ತಂತ್ರಕ್ಕೂ ಜೈ

By Mahesh
|
Google Oneindia Kannada News

KS Eshwarappa
ಬೆಂಗಳೂರು, ಅ.10 : ಒಂದೆಡೆ ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರವನ್ನು ಉಳಿಸಿಕೊಳ್ಳಲು, ಶತಪ್ರಯತ್ನವನ್ನು ಬಿಜೆಪಿ ರಾಜ್ಯ ಮುಖಂಡರು ಮಾಡುತ್ತಿದ್ದಾರೆ. ಇನ್ನೊಂದೆಡೆ ಬಿಹಾರದ ರಾಜಕಾರಣಿಗಳೇ ನಾಚುವಂತೆ ವಿಪಕ್ಷಗಳು ಗೂಂಡಾಗಳನ್ನು ಬಳಸಿ ಶಾಸಕರ ಎಸ್ಕೇಪ್ ಡ್ರಾಮಾ ನಡೆಸುತ್ತಿದ್ದಾರೆ. ಶಾಸಕರ ಖರೀದಿಗೆ ಭೂಗತ ಜಗತ್ತಿನ ಕಪ್ಪು ಹಣ ಬಳಕೆಯಾಗಿದೆ ಎಂಬ ಮಾತು ಹರಡಿದೆ.

ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮತ ಚಲಾಯಿಸುವಂತೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಜೆಡಿಎಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಮಿಷ ಒಡ್ಡಿರುವ ಸಂಗತಿಯನ್ನು ಬಿಜೆಪಿ ಅಧ್ಯಕ್ಷ ಕೆ.ಎಸ್ ಈಶ್ವರಪ್ಪ ಬಯಲುಗೊಳಿಸಿದ್ದಾರೆ.

ಬಿಜೆಪಿ ಶಾಸಕರು ತಂಗಿರುವ ನಗರದ ಹೊರವಲಯದ ಗೋಲ್ಡನ್ ಪಾಮ್ಸ್ ರೆಸಾರ್ಟ್‌ನಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ನಡೆಸಿರುವ ದೂರವಾಣಿ ಸಂಭಾಷಣೆಯ ಧ್ವನಿ ಮುದ್ರಿಕೆಯನ್ನು ಪ್ರದರ್ಶಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಅವರು ಕೆಐಎಡಿಬಿ ಹಗರಣ, ಸಚಿವ ನಿರಾಣಿ ಹಗರಣದ ಸಿಡಿ ಈಗಾಗಲೇ ಹೊರಕ್ಕೆ ಬಿಟ್ಟಿದ್ದೀನಿ. ಮುಂದಿನ ದಿನಗಳಲ್ಲಿ ಬಿಜೆಪಿ ಹಿರಿಯ ಮುಖಂಡರು ನಡೆಸಿರುವ ಅನೇಕ ಹಗರಣಗಳ ಸಿಡಿಗಳನ್ನು ಹೊರಬಿಡುತ್ತೇನೆ ಎಂದಿದ್ದಾರೆ.

ಸಿ.ಟಿ. ರವಿ ವಿರುದ್ಧ ಜೆಡಿಎಸ್ ನ ಬಾಲಕೃಷ್ಣ ಅವರು ಕಿಡಿಕಾರಿದ್ದಾರೆ. ದೇವೇಗೌಡರ ಕುಟುಂಬದವರನ್ನು ಕಳಿಸಿ ಸಿಎಂ ಮಾಡುತ್ತೇವೆ ಎಂದಿದ್ದ ರವಿಗೆ ಪ್ರತಿ ಸವಾಲು ಹಾಕಿ, ರೇವಣ್ಣ ಅಥವಾ ಅನಿತಾ ಅವರನ್ನು ಕಳಿಸುತ್ತೇವೆ. ಯಡಿಯೂರಪ್ಪ ಅವರು ಶರಣಾಗತಿ ಒಪ್ಪಿಕೊಂಡು ಸಿಎಂ ಮಾಡಲಿ ನೋಡೋಣ ಎಂದು ನಗೆಯಾಡಿದರು.


ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X