ತುಮಕೂರಿನಲ್ಲಿ 'ಆಧಾರ್' ಗುರುತಿನ ಚೀಟಿಗೆ ಚಾಲನೆ

Karnataka gets identity, Aadhar launched
ತುಮಕೂರು, ಅ.9: ಬಹುನಿರೀಕ್ಷಿತ ಬಯೋಮೆಟ್ರಿಕ್ಸ್ ಮಾಹಿತಿ ಆಧಾರದಲ್ಲಿ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡುವ 'ಆಧಾರ್'ಗೆ ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರು ಮತ್ತು ತುಮಕೂರಿನಲ್ಲಿ ಏಕಕಾಲಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಮೈಸೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಹಿತಿ ಸಂಗ್ರಹಣೆಯೊಂದಿಗೆ ಸಾಂಕೇತಿಕವಾಗಿ ಹಾಗೂ ತುಮಕೂರಿನಲ್ಲಿ ಸಿದ್ದಗಂಗಾ ಶ್ರೀಗಳ ಮಾಹಿತಿ ಸಂಗ್ರಹಣೆಯೊಂದಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ 103 ವರ್ಷಗಳ ಜ್ಞಾನವೃದ್ಧರೂ ಆದ ಶಿವಕುಮಾರ ಸ್ವಾಮೀಜಿಗಳ ಹತ್ತು ಬೆರಳುಗಳ ಬೆರಳಚ್ಚು, ಎರಡು ಕಣ್ಣಿನ ಸ್ಕ್ಯಾನ್ ಮಾಡಿ ಭಾವಚಿತ್ರ ತೆಗೆಯುವ ಮೂಲಕ ಅವರ ಮಾಹಿತಿ ದಾಖಲಿಸಿಕೊಳ್ಳಲಾಯಿತು.

ಸ್ವಾಮೀಜಿಗಳಿಗೆ ಮುಂಬರುವ 15 ದಿನಗಳಲ್ಲಿ ವಿಶಿಷ್ಟ ಗುರುತಿನ ಚೀಟಿಯನ್ನು ರವಾನಿಸಲಾಗುತ್ತದೆ ಎಂದು ವಿಪ್ರೋ ಅಧಿಕಾರಿಗಳು ತಿಳಿಸಿದರು. ಬಳಿಕ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಯುಐಡಿಗಾಗಿ ನೋಂದಾಯಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+