ಪ್ರತಿಭಾ ಕೊಲೆ ಪ್ರಕರಣ: ಕ್ಯಾಬ್ ಡ್ರೈವರ್ ಗೆ ಜೀವಾವಧಿ ಶಿಕ್ಷೆ

ಈ ನಡುವೆ ಅಪರಾಧಿ ಶಿವಕುಮಾರ್ ನ ಪತ್ನಿ ಸುಮಾ ಕೋರ್ಟ್ ಮುಂದೆ ರಂಪಾಟ ಮಾಡಿ, 'ನನ್ನ ಗಂಡ ನಿರಪರಾಧಿ, ನನ್ನ ಗಂಡ ಮನೆಗೆ ಬರದಿದ್ದರೆ ನಾನು ಕೋರ್ಟ್ ಮುಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚೀರಾಡಿದ ಪ್ರಸಂಗ ನಡೆದಿದೆ.
'ತೀರ್ಪಿನಿಂದ ಸಮಾಧಾನವಾಗಿದೆ. ಕೊನೆಗೂ ನ್ಯಾಯ ದೊರಕಿದೆ. ಆದರೆ, ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ನೀಡಬಾರದು' ಎಂದು ಪ್ರತಿಭಾ ತಾಯಿ ಗೌರಮ್ಮ ಗದ್ಗದಿತರಾಗಿ ಪ್ರತಿಕ್ರಿಯಿಸಿದರು.
ಎಚ್ ಪಿ ಗ್ಲೋಬಲ್ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಪ್ರತಿಭಾ(28) ರಾತ್ರಿಪಾಳಿಗೆ ಕಚೇರಿಗೆ ತೆರಳುವಾಗ ಕ್ಯಾಬ್ ಚಾಲಕ ಶಿವಕುಮಾರ್ ನಿಂದ 2005ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾಗಿದ್ದಳು. 2006ರಲ್ಲಿ ಈ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಸುಮಾರು ನಾಲ್ಕು ವರ್ಷಗಳಿಂದ ವೃದ್ಧತಾಯಿ ಗೌರಮ್ಮ(80) ನ್ಯಾಯಾಲಯದ ಪ್ರತಿ ವಿಚಾರಣೆಯಲ್ಲಿ ಭಾಗವಹಿಸಿ, ನ್ಯಾಯಕ್ಕಾಗಿ ಕಾದಿದ್ದು ಸಾರ್ಥಕವಾಗಿದೆ.












Click it and Unblock the Notifications