ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್ ವೆಲ್ತ್ : ಈಜುಕೊಳ ಮಲಿನವಾಗಿಲ್ಲ : ಕಲ್ಮಾಡಿ

By Mahesh
|
Google Oneindia Kannada News

Suresh Kalmadi
ನವದೆಹಲಿ, ಅ.8: ಇಲ್ಲಿನ ಡಾ.ಎಸ್ ಪಿ ಮುಖರ್ಜಿ ಅಕ್ಯುಟಿಕ್ ಕಾಂಪ್ಲೆಕ್ಸ್‌ನಲ್ಲಿರುವ ಈಜು ಕೊಳ ಮಲಿನಗೊಂಡಿರುವ ಬಗ್ಗೆ ಬಂದಿರುವ ವರದಿಗಳನ್ನು ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್(CGF)ಅಲ್ಲಗೆಳೆದಿದೆ.ವಿದೇಶಿ ಈಜುಪಟುಗಳು ಅಸ್ವಸ್ಥರಾಗಿರುವ ಬಗ್ಗೆ ನಮಗೆ ಕಾಳಜಿ ಇದೆ ಆದರೆ, ಈಜುಕೊಳ ಸಂಪೂರ್ಣ ಸ್ವಚ್ಛವಾಗಿದೆ ಎಂದು ಸಿಜಿಎಫ್ ಅಧ್ಯಕ್ಷ ಮೈಕ್ ಫೆನ್ನೆಲ್ ಹೇಳಿದ್ದಾರೆ.

ಇಲ್ಲಿನ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 52 ಮಂದಿ ವಿದೇಶಿ ಈಜುಪಟುಗಳು ಅಸ್ವಸ್ಥಗೊಂಡಿದ್ದರು. ಅಸ್ವಸ್ಥಗೊಂಡ ಈಜುಪಟುಗಳ ಪೈಕಿ ಆಸ್ಟ್ರೇಲಿಯಾದ 12 ಮತ್ತು ಇಂಗ್ಲೆಂಡ್‌ನ 40 ಮಂದಿ ಈಜುಪಟುಗಳು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈಜು ಕೊಳದಲ್ಲಿ ಈಜಿದ ಈಜುಪಟುಗಳಿಗೆ ಒಮ್ಮೆಲೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಈ ಪೈಕಿ ಇಬ್ಬರು ಪದಕ ಗೆಲ್ಲುವ ನಿರೀಕ್ಷೆ ಹೊತ್ತವರು ಮುಂದಿನ ಸ್ಫರ್ಧೆಯಿಂದ ದೂರ ಉಳಿಯುವಂತಾಗಿದೆ. ಈಜುಪಟುಗಳು ಅಸ್ವಸ್ಥಗೊಳ್ಳಲು ಈಜು ಕೊಳದ ನೀರು ಮಲಿನಗೊಂಡಿರುವುದು ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಘಟನೆಗೆ ಜಲಮಾಲಿನ್ಯ ಅಥವಾ ಆಹಾರ ಸಮಸ್ಯೆ ಕಾರಣವೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾಮನ್‌ವೆಲ್ತ್ ಆಯೋಜನಾ ಸಮಿತಿಯ ಅಧ್ಯಕ್ಷ ಸುರೇಶ್ ಕಲ್ಮಾಡಿ ಭರವಸೆ ನೀಡಿದ್ದಾರೆ.

ಕಲುಷಿತ ಆಹಾರ ಸೇವನೆಯನ್ನು ಅಲ್ಲಗೆಳೆದಿರುವ ಆಸ್ಟ್ರೇಲಿಯಾ ತಂಡದ ಮುಖ್ಯಸ್ಥ ಮೊನೆಘೆಟ್ಟಿ, ಆಹಾರ ಸೇವೆನೆಯಲ್ಲಿ ವ್ಯತ್ಯಯವಾಗಿದ್ದರೆ, ಈಜುಪಟುಗಳಿಗೆ ಮಾತ್ರ ಯಾಕೆ ತೊಂದರೆ ಕಂಡುಬಂದಿದೆ.ಎಲ್ಲಾ ಕ್ರೀಡಾಳುಗಳಿಗೆ ನೀಡುವ ಆಹಾರವನ್ನೇ ನಮ್ಮ ತಂಡ ಸೇವಿಸಿದೆ ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X