ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಕೆಳಗೆ ಉರುಳಿದರೆ ರಾಜ್ಯಕ್ಕೆ ಉಳಿಗಾಲ

By Mahesh
|
Google Oneindia Kannada News

Anand Asnotikar
ಅಜ್ಞಾತ ಸ್ಥಳ(ಶಿರಡಿ?), ಅ.7: ಇತ್ತ ಸಂಧಾನ ಮಾಡುವಲ್ಲಿ ಶ್ರೀಕೃಷ್ಣ ಪರಮಾತ್ಮನನ್ನು ಮೀರಿಸಿರುವ ರೆಡ್ಡಿ ಸೋದರರು, ಒಬೊಬ್ಬರಾಗಿ ಭಿನ್ನಮತೀಯರನ್ನು ಸೆಳೆಯುತ್ತಿದ್ದಾರೆ. ಅತ್ತ, ಈ ಎಲ್ಲಾ ಬೆಳವಣಿಗೆ ಕಂಡು ಮಾಧ್ಯಮ ಮುಂದೆ ಬರುವ ಸೂಚನೆ ನೀಡಿದ ಭಿನ್ನಮತ ನಾಯಕರಲ್ಲಿ ಒಬ್ಬರಾದ ಬಾಲಚಂದ್ರ ಜಾರಕಿಹೊಳಿ ಹೇಳಿದಿಷ್ಟು "ಪಕ್ಷೇತರರು ಸೇರಿ 18 ಜನ ಒಟ್ಟಿಗೆ ಇದ್ದೇವೆ. ಅ.11 ರಂದು ಸಿಎಂ ಯಡಿಯೂರಪ್ಪ ವಿರುದ್ಧ ಮತ ಚಲಾಯಿಸುವುದು ಖಚಿತ. ಶಾಸಕತ್ವ ಅನರ್ಹಗೊಂಡರು ಚಿಂತೆಯಿಲ್ಲ. ವಿಪ್ ಜಾರಿಗೊಳಿಸಿದರೂ ಹೆದರುವುದಿಲ್ಲ".

"ನಮಗೆ ಅನ್ಯಾಯವಾಗಿದೆ. ನಾಡಿಗೆ ಒಳ್ಳೆ ಆಡಳಿತ ನೀಡಬೇಕು ಎಂಬುದು ನಮ್ಮ ಅಪೇಕ್ಷೆ. ಮುಖ್ಯಮಂತ್ರಿ ಪಟ್ಟದಿಂದ ಯಡಿಯೂರಪ್ಪ ಅವರು ಕೆಳಗಿಳಿಯಲೇ ಬೇಕು. ನಾವು ಮಾಧ್ಯಮದ ಮುಂದೆ ಬಂದು ನಮ್ಮ ನಾಯಕರು ಯಾರೂ ಎಂದು ಪ್ರಕಟಿಸಲಿದ್ದೇವೆ. ಯಾವ ನಾಯಕರ ಆಮಿಷಕ್ಕೂ ಬಲಿಯಾಗುವುದಿಲ್ಲ.

ವಿಪಕ್ಷ ನಾಯಕರ ಜೊತೆ ಮಾತುಕತೆ ಮಾಡಿಲ್ಲ. 120 ಜನ ಶಾಸಕರಲ್ಲಿ ಒಬ್ಬರ ಜೊತೆಯಾದರೂ ಸಿಎಂ ಸಮಾಧಾನದಿಂದ ಮಾತಾಡಿಲ್ಲ. ಅವರ ನಡೆನುಡಿ ಸರಿಯಿಲ್ಲ. ಸಿಎಂ ಸಮರ್ಥರಿದ್ದಾರೆ ಯಾರಾದರೂ ಎದೆಮುಟ್ಟಿ ಹೇಳಿದರೆ ನಾನು ಇಂದೇ ರಾಜಕೀಯ ತೊರೆದುಬಿಡುತ್ತೇನೆ" ಎಂದು ವೀರಾವೇಷದ ಮಾತಾಡಿದವರು ಆನಂದ್ ಆಸ್ನೋಟಿಕರ್.

ತಾವಿರುವ ಸ್ಥಳದ ಸುಳಿವು ಕೊಡದ( ಪುಣ್ಯಸ್ಥಳ ಎಂದಷ್ಟೇ ಖಾಸಗಿ ವಾಹಿನಿಗೆ ಹೇಳಿದರು. ಮೂಲಗಳ ಪ್ರಕಾರ ಎಲ್ಲರೂ ಶಿರಡಿ ಸಾಯಿ ಬಾಬಾನ ಸನ್ನಿಧಿಯಲ್ಲಿದ್ದಾರೆ) ಆನಂದ್ ಆಸ್ನೋಟಿಕರ್ ಅವರು ಅಧಿಕಾರ ವ್ಯಾಮೋಹಿ ಸಿಎಂ, ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಅತೃಪ್ತರ ಸಂಖ್ಯೆ ಸದ್ಯದಲ್ಲೇ 40 ಕ್ಕೇರಲಿದೆ. ಸ್ವಲ್ಪ ಸಮಯದಲ್ಲೇ ಸುದ್ದಿಗೋಷ್ಠಿ ನಡೆಸುತ್ತೇವೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X