ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ಸ್ಮರಣೆ ಅಗತ್ಯ : ಎಸ್ಕೆ ನಟರಾಜ್

By Mrutyunjaya Kalmat
|
Google Oneindia Kannada News

SK Nataraj
ಬೆಂಗಳೂರು, ಅ. 3 : ಅಹಿಂಸೆ, ತ್ಯಾಗ, ಬಲಿದಾನಕ್ಕೆ ಹೆಸರಾದ ಗಾಂಧೀಜಿಯವರನ್ನು ಶಾಲೆ, ಕಾಲೇಜು ಹಾಗೂ ಸರಕಾರಿ ಕಚೇರಿಗಳಲ್ಲಿ ಸ್ಮರಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಮೇಯರ್ ಎಸ್.ಕೆ. ನಟರಾಜ್ ತಿಳಿಸಿದರು.

ಗಾಂಧಿ ಜಯಂತಿ ಅಂಗವಾಗಿ ಎಂ.ಜಿ. ರಸ್ತೆಯ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶನಿವಾರ ಮಾತನಾಡಿ,ಗಾಂಧೀಜಿಯವರ ಸರಳ ಬದುಕು ಹಾಗೂ ತೊಡುತ್ತಿದ್ದ ಖಾದಿ ಉಡುಗೆ ನಮಗೆಲ್ಲ ಆದರ್ಶ ಎಂದರು. ಬಿಬಿಎಂಪಿ ಆಯುಕ್ತ ಸಿದ್ದಯ್ಯ, ಉಪ ಮೇಯರ್ ಎನ್. ದಯಾನಂದ, ಮಾಜಿ ಸಂಸದ ವಿ.ಎಸ್. ಕೃಷ್ಣ ಅಯ್ಯರ್, ಮಾಜಿ ಸಚಿವ ರಾಮಚಂದ್ರ ಗೌಡ, ಬಿಬಿಎಂಪಿ ಸದಸ್ಯ ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್‌ಗಳಾದ ಪಿ.ಆರ್. ರಮೇಶ್, ಜೆ. ಹುಚ್ಚಪ್ಪ, ರಾಮಚಂದ್ರಪ್ಪ ಮತ್ತಿತರರು ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಸರ್ವ ಧರ್ಮ ಪ್ರಾರ್ಥನೆ ನಡೆಯಿತು.

ಮಾರಾಟಗಾರರ ವಿರುದ್ಧ ಕ್ರಮ
: ಗಾಂಧಿ ಜಯಂತಿಯಂದು ಮದ್ಯ, ಮಾಂಸ ಮಾರಿ, ಕಾನೂನು ಉಲ್ಲಂಘಿಸಿದ ಅಂಗಡಿಗಳನ್ನು ವಶಕ್ಕೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.

ಮೇಯರ್ ನಿಧಿಯಿಂದ ನೆರವು : ಬಡರೋಗಿಗಳ ಚಿಕಿತ್ಸೆಗೆ ಮೇಯರ್ ನಿಧಿಯಿಂದ ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದು ಮೇಯರ್ ಎಸ್.ಕೆ. ನಟರಾಜ್ ತಿಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಿಬಿಎಂಪಿ ಶನಿವಾರ ಆಯೋಜಿಸಿದ್ದ ನಗರ ಸ್ಲಂ ನಿವಾಸಿಗಳ ಆರೋಗ್ಯ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರೋಗಿಗಳು ಚಿಕಿತ್ಸೆಯ ಅಂದಾಜು ವೆಚ್ಚದ ವರದಿಯನ್ನು ವೈದ್ಯರಿಂದ ಪಡೆದು ಪಾಲಿಕೆಗೆ ಸಲ್ಲಿಸಬೇಕು. ಪರಿಶೀಲಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಮೇಯರ್ ನಿಧಿಯಿಂದ ಈಗಾಗಲೇ 700 ಬಡರೋಗಿಗಳು ಪ್ರಯೋಜನ ಪಡೆದಿದ್ದಾರೆ. ಜಯದೇವ ಹೃದ್ರೋಗ ಅಸ್ಪತ್ರೆಗೆ 1.5 ಕೋಟಿ, ಕೆಂಪೇಗೌಡ ಮತ್ತು ವಿಕ್ಟೋರಿಯ ಆಸ್ಪತ್ರೆಗೆ ತಲಾ 50 ಲಕ್ಷ ರೂ. ಸಹಾಯ ಮಾಡಲಾಗಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X