ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಹವಾಮಾನ ವರದಿ ಮತ್ತು ಮುನ್ಸೂಚನೆ

By Shami
|
Google Oneindia Kannada News

Karnataka weather forecast
ಬೆಂಗಳೂರು, ಸೆ. 30 : ಕರ್ನಾಟಕದ ನಾನಾ ಪ್ರದೇಶಗಳಲ್ಲಿ ಗುರುವಾರ ಬೆಳಗ್ಗೆ 8.30 ರವರೆಗೆ ದಾಖಲಾದ ಹವಾಮಾನ ವರದಿಗಳ ಸಾರಾಂಶ ಈ ರೀತಿ ಇದೆ. ಗಮನಾರ್ಹ ಸುದ್ದಿಯೆಂದರೆ ಕುಂದಾಪುರ ಮತ್ತು ಲಕ್ಕವಳ್ಳಿಯಲ್ಲಿ ತಲಾ 8 ಸೆಂಟಿ ಮೀಟರ್ ಮಳೆ ಬಿದ್ದಿದೆ. ಕರಾವಳಿ ಪ್ರದೇಶದ ಅನೇಕ ತಾಲೂಕುಗಳಲ್ಲಿ ಮಳೆ ಆಯ್ತು. ಉತ್ತರ ಕರ್ನಾಟಕದಲ್ಲಿ ಹಲವೆಡೆ ಮಳೆರಾಯ ಚುರುಕಾಗಿದ್ದರೆ ದಕ್ಷಿಣ ಒಳನಾಡಿನಲ್ಲಿ ಮೋಡ ಹೆಚ್ಚು,ಮಳೆ ಕಡಿಮೆ. ಮಾತು ಜಾಸ್ತಿ, ಕೆಲಸ ಕಡಿಮೆ ಎನ್ನುವಂತೆ.

ವಿವರಗಳು : ಬೆಳ್ತಂಗಡಿ, ಕಾರ್ಕಳ, ತರೀಕೆರೆ ತಲಾ 4 ಸೆಂಮೀ. ಮೂಲ್ಕಿ, ಉಡುಪಿ, ಅಂಕೋಲ, ಅಥಣಿ, ಹುಮ್ನಾಬಾದ್, ಯಾದಗಿರಿ, ಆಗುಂಬೆ, ಕೊಪ್ಪ, ಅಜ್ಜಂಪುರ ತಲಾ 3 ಸೆಂಮೀ. ಚಿಕ್ಕೋಡಿ, ಸವದತ್ತಿ, ಸೇಡಬಾಳ, ಇಂಡಿ, ಅಫ್ಜಲ್ ಪುರ, ಯಡಮಾರಿ, ನಾರಾಯಣಪುರ, ಜಯಪುರ, ಎನ್ ಆರ್ ಪುರ, ಕೊಟ್ಟೂರು, ಹೊಸದುರ್ಗದಲ್ಲಿ ತಲಾ 2 ಸೆಂಮೀ.

ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಮಾಣಿ, ಭಟ್ಕಳ, ಶಿರಸಿ, ಹೊನ್ನಾವರ, ಕಾರವಾರ, ಖಾನಾಪುರ, ಹುಕ್ಕೇರಿ, ಬೆಳಗಾವಿ ವಿಮಾನ ನಿಲ್ದಾಣ, ಚಿತ್ತಾಪುರ, ಹೊಸನಗರ, ಭದ್ರಾವತಿ, ಶೃಂಗೇರಿ, ಕಮರಡ್ಡಿಯಲ್ಲಿ ತಲಾ ಒಂದು ಸೆಂಮೀಟರ್ ಮಳೆ ಸುರುದಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಹವಾಮಾನ ಮುನ್ಸೂಚನೆ : ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಪ್ರದೇಶದಲ್ಲಿ ಮಳೆ, ಜೋರು ಮಳೆ, ಭಾರಿ ಮಳೆ ಬೀಳುವ ನಿರೀಕ್ಷೆಯಿದೆ. ಮುಖ್ಯವಾಗಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನದಲ್ಲಿ ಹೆಚ್ಚೆಚ್ಚು ಮಳೆ ಆಗುತ್ತದೆ ಎಂದು ರೈತಾಪಿ ವರ್ಗಕ್ಕೆ ಹವಾಮಾನ ವರದಿ ತಿಳಿಸುತ್ತಿದೆ.

ಒಳನಾಡಿನಲ್ಲಿ ಕೆಲವೆಡೆ ಮಳೆ ಆಗಬಹುದು ಅಥವಾ ಆಗದೇ ಇರಬಹುದು !! ಇನ್ನು ಬೆಂಗಳೂರಿನಲ್ಲಿ ಇಡೀ ದಿನ ರಾತ್ರಿ ಮೋಡ. ಆಗಾಗ ಲಂಡನ್ ಬಿಸಿಲು. ಕೆಂಗೇರಿಯಲ್ಲಿ ಮಳೆ ಬೀಳಬಹುದು, ಯಲಹಂಕದಲ್ಲಿ ಮಳೆ ಬಾರದೇ ಹೋಗಬಹುದು ಎಂಬಂತಹ ಲೆಕ್ಕಾಚಾರ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X