ಸಿದ್ದರಾಮಯ್ಯಗೆ ಹಳೆ ಗಂಡನ ಪಾದವೇ ಗತಿ?

ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ ನಿವಾಸದಲ್ಲಿ ಭೇಟಿ ಮಾಡಿದ್ದೇವೆ. ಇದೊಂದು ಸೌಜನ್ಯದ ಭೇಟಿ. ಭೋಜನಕ್ಕೆ ಇಬ್ರಾಹಿಂ ಆಹ್ವಾನಿಸಿದ್ದರು. ಭೇಟಿಯ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದಾರೆ.
ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಯಾವುದೇ ಚರ್ಚೆ ಆಗಿಲ್ಲ. ಮೈತ್ರಿ ವಿಚಾರ ಪಕ್ಷದ ಹೈಕಮಾಂಡ್‌ಗೆ ಸೇರಿದ್ದು. ಇನ್ನು ಜೆಡಿಎಸ್ ಸೇರುವುದು ಆಗದ ಮಾತು. ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ. ತಾವು ಈಗಲೂ ಕಾಂಗ್ರೆಸ್‌ನ ಶಾಸಕ, ವಿಧಾನಸಭೆ ಪ್ರತಿಪಕ್ಷ ನಾಯಕ ಎಂದು ಊಹಾಪೋಹಗಳಿಗೆ ತೆರೆ ಎಳೆದರು.
ಕಡೂರು ಮತ್ತು ಗುಲ್ಬರ್ಗ ದಕ್ಷಿಣ ಉಪಚುನಾವಣೆ ಸೇರಿದಂತೆ ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದೆ. ಇದರಿಂದ ತೀವ್ರ ಬೇಸತ್ತಿರುವ ಸಿದ್ದರಾಮಯ್ಯ ಮರಳಿ ತವರಮನೆ ಜೆಡಿಎಸ್ ಗೆ ಕಡೆಗೆ ಮುಖ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇಬ್ರಾಹಿಂ ಕೂಡಾ ದಳಪತಿಯಾಗಿದ್ದು, ಅವರ ನಿವಾಸದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ಅನೇಕ ಉಪಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು.
ಜೊತೆಗೆ ದೇವೇಗೌಡರು ಬಹಿರಂಗವಾಗಿ ಸಿದ್ಧರಾಮಯ್ಯ ಅವರನ್ನು ಮರಳಿ ಪಕ್ಷ ಸೇರಲು ಆಹ್ವಾನಿಸಿರುವುದು, ಇಬ್ರಾಹಿಂ ನಿವಾಸದಲ್ಲಿ ಸಿದ್ದು, ಎಚ್ಡಿಕೆ ಭೇಟಿ ಮಾಡಿರುವುದಕ್ಕೆ ಏನಾದರೂ ಸಂಬಂಧವಿದೆಯೇ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ.












Click it and Unblock the Notifications