ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಣ್ಣ ಪ್ರತಿಮೆ ಅನಾವರಣ, ಕರವೇಗೆ ಅಪಮಾನ

By Mahesh
|
Google Oneindia Kannada News

Karave not invited to Rayanna statue unevil program
ಬೆಂಗಳೂರು, ಸೆ.29: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭಕ್ಕೆ ಯಾವುದೇ ಕನ್ನಡಪರ ಸಂಘಟನೆಗಳಿಗೆ ಆಹ್ವಾನಿಸದೆ ಬಿಬಿಎಂಪಿ ಉದ್ದೇಶಪೂರ್ವಕವಾಗಿ ಅಪಮಾನ ಎಸಗಿದೆ ಎಂದು ಜನಪರ ಜಾಗೃತಿ ವೇದಿಕೆ ಅಪಾದನೆ ಮಾಡಿದೆ.

ಸಂಗೊಳ್ಳಿ ರಾಯಣ್ಣ ರಾಜ್ಯದ ಸಮಸ್ತ ಕನ್ನಡಿಗರು ಅಭಿಮಾನ ಪಡುವಂಥ ವೀರಪುರುಷ. ಕನ್ನಡ ಚಳವಳಿಯ ನೇತಾರರೆಲ್ಲರಿಗೂ ಆತ ಆದರ್ಶ ವ್ಯಕ್ತಿ. ಇಂತಹ ಸಂದರ್ಭದಲ್ಲಿ ಅವರ ಪ್ರತಿಮೆ ಅನಾವರಣಕ್ಕೆ ಯಾವುದೇ ಕನ್ನಡ ಸಂಘಟನೆಗಳನ್ನು ಆಹ್ವಾನಿಸದೆ ರಾಜಕೀಯ ಸಮಾರಂಭ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ವೇದಿಕೆ ಆರೋಪಿಸಿದೆ.

ಮಹಾರಾಷ್ಟ್ರದಿಂದ ಬೆಂಗಳೂರಿಗೆ ಪ್ರತಿಮೆ ತರಿಸುವ ವೆಚ್ಚವನ್ನು ಕರ್ನಾಟಕ ರಕ್ಷಣಾ ವೇದಿಕೆ ಭರಿಸಿದ್ದು ಹಾಗೂ ರಾಯಣ್ಣ ಪ್ರತಿಮೆ ಅನಾವರಣವಾಗಬೇಕು ಎಂದು ಸರ್ಕಾರದ ಮೇಲೆ ವಾಟಾಳ್ ನಾಗರಾಜ್ ಒತ್ತಾಯ ಹೇರಿದ್ದರು.

ಆದರೆ, ವಾಟಾಳ್ ನಾಗರಾಜ್ ಅಥವಾ ನಾರಾಯಣಗೌಡ ಅವರನ್ನು ಕರೆಯದೆ ಇರುವುದು ಖಂಡನೀಯ ಎಂದು ವೇದಿಕೆಯ ಅಧ್ಯಕ್ಷ ಟಿಕೆ ಮಹೇಶ್, ಸಂವಹನ ವೇದಿಕೆ ಸಂಚಾಲಕ ದಿನೇಶ್ ಕುಮಾರ್, ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀ ಉಲ್ಲಾಖಾನ್, ಚಾಲುಕ್ಯ ಯುವಕರ ಸಂಘ ಅಧ್ಯಕ್ಷ ವಿ ಸುರೇಶ್, ಡಾ. ರಾಜ್ ಕುಮಾರ್ ಪ್ರತಿಮೆ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಕೆ ವಿ ರಮೇಶ್ ಅವರು ಬಿಬಿಎಂಪಿ ಕ್ರಮವನ್ನು ಖಂಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X